ಇಸ್ರೇಲ್ ಸೇನೆಯ ವಾಯು ದಾಳಿಗೆ 34 ಮಂದಿ ಫ್ಯಾಲೆಸ್ತೀನಿಯರು ಮೃತ್ಯು
ಉತ್ತರ ಗಾಝಾದಲ್ಲಿ ಇಸ್ರೇಲ್ ಸೇನೆಯಿಂದ ನರಮೇಧ ಮುಂದುವರಿದಿದ್ದು ಫ್ಯಾಲೆಸ್ತೀನ್ ನಿರಾಶ್ರಿತರು ಆಶ್ರಯ ಪಡೆದಿದ್ದ ಐದು ಅಂತಸ್ತುಗಳ ಕಟ್ಟಡವೊಂದರ ಮೇಲೆ ಅ.29ರಂದು ಇಸ್ರೇಲಿ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಹೆಚ್ಚು ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ತಿಳಿದು ಬಂದಿದೆ.

ಇಸ್ರೇಲ್ ಸೇನೆಯ ದಾಳಿಯಿಂದ ಈಗಾಗಲೇ ನೂರಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.