ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಭರ್ಜರಿ ಗಿಫ್ಟ್ ನೀಡಿದ ತೆಲಂಗಾಣ ಸಿಎಂ
ಐಸಿಸಿ ಟಿ20 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾಗೆ ಭರ್ಜರಿ ಬಹುಮಾನ ಈಗಾಗಲೇ ಬಿಸಿಸಿಐ ಘೋಷಿಸಿದೆ. ಅದರ ಬೆನ್ನಲ್ಲೇ ಇದೀಗ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನಿವೇಶನ ಮತ್ತು ಸರ್ಕಾರಿ ಕೆಲಸ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಮೊಹಮ್ಮದ್ ಸಿರಾಜ್ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದರು. ಸಿಎಂ ರೇವಂತ್ ರೆಡ್ಡಿ ಅವರು ಸಿರಾಜ್ ಅವರನ್ನು ಸನ್ಮಾನಿಸಿ, ಅವರ ಆಟವನ್ನು ಶ್ಲಾಘಿಸಿದರು.
ಮೊಹಮ್ಮದ್ ಸಿರಾಜ್ ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ತೆಲಂಗಾಣ ರಾಜ್ಯಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ ಎಂದ ಸಿಎಂ ರೇವಂತ್ ರೆಡ್ಡಿ ಸಿರಾಜ್‌ಗೆ ರಾಜ್ಯ ಸರ್ಕಾರದ ಪರವಾಗಿ ಮನೆ ಮತ್ತು ಉದ್ಯೋಗವನ್ನು ನೀಡುವುದಾಗಿ ಹೇಳಿದ್ದಲ್ಲದೇ ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.