ಕ್ರೈಂರಾಷ್ಟ್ರೀಯ

ಗಂಡ ಕಪ್ಪಗಿದ್ದಾನೆ ಎಂದು ನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

ತನ್ನ ಗಂಡ ಕಪ್ಪಾಗಿದ್ದಾನೆ ಎಂದು ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ವರದಿಯಾಗಿದೆ. .  ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆ ಮಹಿಳೆಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು ತನ್ನ ಗಂಡ ಕಪ್ಪಗಿದ್ದಾನೆ ಎಂದು ಆಕೆ ಕೊರಗುತ್ತಿದ್ದಳು ಎನ್ನಲಾಗಿದೆ. ತನ್ನ ಮದುವೆಯಿಂದ ಅವಳು ಸಂತೋಷವಾಗಿರಲಿಲ್ಲ. ಆಕೆಯ ಆತ್ಮಹತ್ಯೆಯ ನಂತರ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಆ ಮಹಿಳೆಗೆ ಪತಿ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.

ತನಗೆ ಸುಂದರವಾದ ಗಂಡ ಬೇಕಾಗಿತ್ತು ಎಂಬ ಕೊರಗು ಆ ಮಹಿಳೆಗೆ ಕಾಡುತ್ತಿತ್ತು. ವೈವಾಹಿಕ ಜೀವನದಲ್ಲಿ ಆಕೆ ಖುಷಿಯಾಗಿರಲಿಲ್ಲ. ಆಕೆಯ ಪತಿ ಕಪ್ಪಗಿದ್ದು, ಅವಳು ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಳು ಎನ್ನಲಾಗಿದೆ. ಅದರಿಂದ ನೊಂದು ತನ್ನ ಜೀವನ ಕೊನೆಗೊಳಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!