ವಲಯ ಮಟ್ಟದ ಕ್ರೀಡಾಕೂಟ: ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ
ಉಪ್ಪಿನಂಗಡಿ: ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರ ಪುಂಜಾಲಕಟ್ಟೆ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇದರ ಸಹಭಾಗಿತ್ವದಲ್ಲಿ
ಪುಂಜಾಲಕಟ್ಟೆ ವಲಯ ಮಟ್ಟದ ಕ್ರೀಡಾಕೂಟ ಇತ್ತಿಚೆಗೆ
ನಡೆಯಿತು.
ಜ್ಞಾನ ಭಾರತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಮೀನ್ ಕರಾಯ ಅವರು 400 ಮೀ ಒಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು 9 ನೆ ತರಗತಿ ವಿದ್ಯಾರ್ಥಿನಿ ನಿಹಮ ಫಾತಿಮ ಉದ್ದಜಿಗಿತ ದಲ್ಲಿ 2ನೇ ಸ್ಥಾನ ಮತ್ತು ಟ್ರಿಪಲ್ ಜಂಪಲ್ಲಿ 3 ನೇ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಅಯ್ಕೆಯಾಗಿದ್ದಾರೆ. ಶಾಲಾ ಸಂಚಾಲಕರಾದ ರವೂಫ್ ಯು ಟಿ ಮತ್ತು ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಇಕ್ಬಾಲ್ ಜೊಗಿಬೆಟ್ಟು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.