ಸಿರಿಯಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ: ಉತ್ತರ ಇಸ್ರೇಲಿ ಬಂದರು ಮೇಲೆ ಹಿಜ್ಬುಲ್ಲಾ ದಾಳಿ
ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕಟ್ಟಡಕ್ಕೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ಮತ್ತು ಹಿಜ್ಬುಲ್ಲಾ ನಾಯಕರು ಆಗಾಗ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಇಸ್ರೇಲ್ ಡಮಾಸ್ಕಸ್ ನ ಪಶ್ಚಿಮದಲ್ಲಿರುವ ಮೆಜಾಹ್ ಉಪನಗರದಲ್ಲಿರುವ ವಸತಿ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದ್ದು ಮೂರು ರಾಕೆಟ್ ಗಳನ್ನು ಹಾರಿಸಲಾಯಿತು ಎಂದು ತಿಳಿದು ಬಂದಿದೆ.
100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ನಗರದ ಮೇಲೆ ಹಾರಿಸಲಾಗಿದ್ದು ಹೆಚ್ಚಿನ ರಾಕೆಟ್‌ಗಳನ್ನು ಐರನ್ ಡೋಮ್ ವ್ಯವಸ್ಥೆಯಿಂದ ತಡೆಹಿಡಿಯಲ್ಪಟ್ಟವು. ಆದರೂ ಕೆಲವು ಹಾಯ್ಫಾ ಉಪನಗರಗಳಾದ ಕಿರ್ಯಾತ್ ಯಾಮ್ ಮತ್ತು ಕಿರ್ಯಾತ್ ಮೊಟ್ಜ್‌ಕಿನ್‌ನಲ್ಲಿ ಸ್ಫೋಟಗೊಂಡಿದೆ ಎಎನ್ನಲಾಗಿದೆ. ದಾಳಿ ಪರಿಣಾಮ ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.