ಕರಾವಳಿ

ಮಧುರ ಇಂಟರ್ನ್ಯಾಷನಲ್ ಸ್ಕೂಲ್’ನ ಪ್ರಾಂಶುಪಾಲ ರಾಜೀಶ್ ಕುಮಾರ್ ರವರಿಗೆ ಸಾಮಾಜಿಕ ಜವಾಬ್ದಾರಿ ಪ್ರಾಂಶುಪಾಲ ಪ್ರಶಸ್ತಿ





ಪುತ್ತೂರು: ತಿರುವನಂತಪುರ ಮೂಲದ ಚೆಂಪಕ ಸಂಶೋಧನೆ ಮತ್ತು ತರಬೇತಿ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಶಾಲೆಯ ಚೆಂಪಕ ಗ್ರೂಪ್‌ನ 2023-24ರ ಸಾಮಾಜಿಕ ಜವಾಬ್ದಾರಿ ಪ್ರಾಂಶುಪಾಲ ಪ್ರಶಸ್ತಿ ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲ ರಾಜೀಶ್ ಕುಮಾರ್ ಆರ್.ಎಸ್ ಅವರಿಗೆ ಲಭಿಸಿದೆ.

ಸೆ.28ರಂದು ರಾಷ್ಟ್ರೀಯ ಪ್ರಧಾನ ಸಮ್ಮೇಳನದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಮಧುರಾ ಶಾಲೆಯು ಹಲವಾರು ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳನ್ನು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುತಿದ್ದು ಈ ಪ್ರಶಸ್ತಿಯು ಮಧುರಾ ಸ್ಕೂಲ್ ನ ಶೈಕ್ಷಣಿಕ ಅನುಭವ ಮತ್ತು ಉತ್ತಮ ಪ್ರದರ್ಶನಕ್ಕೆ ದೊರಕಿದೆ.  ಪ್ರಶಸ್ತಿಯ ಆಯ್ಕೆಯ ಅಂಗವಾಗಿ ರೀಸರ್ಚ್ ಇನ್‌ಸ್ಟಿಟ್ಯೂಟ್ ಕಳೆದ ತಿಂಗಳು ಶಾಲೆಯ ಎಲ್ಲಾ ವಿವರಗಳನ್ನು ಪಡೆದುಕೊಂಡಿತು.

Leave a Reply

Your email address will not be published. Required fields are marked *

error: Content is protected !!