ಉದ್ಯಮಿ ಮುಮ್ತಾಜ್ ಅಲಿ ಪ್ರಕರಣ: ಅಬ್ದುಲ್ ಸತ್ತಾರ್ ಬಹಿಷ್ಕರಿಸಲು ಆಗ್ರಹ
ಮಂಗಳೂರು: ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆಗೆ ದುಷ್ಪ್ರೇರಣೆ ಮಾಡಿದವರ ಪೈಕಿ ಮಾಸ್ಟರ್ ಮೈಂಡ್ ಎನ್ನಲಾಗುತ್ತಿರುವ ಅಬ್ದುಲ್ ಸತ್ತಾರ್ ಎಂಬಾತನನ್ನು ಜಮಾಅತ್ ನಿಂದ ಬಹಿಷ್ಕರಿಸಬೇಕೆನ್ನುವ ಆಗ್ರಹ ಕೇಳಿ ಬಂದಿದ್ದು ಈ ಕುರಿತಾಗಿ ಸಮಿತಿಗಳ ಹೆಸರಿನಲ್ಲಿರುವ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಬ್ದುಲ್ ಸತ್ತಾರ್ ಎಂಬಾತನನ್ನು ಜಮಾಅತ್ ನಿಂದ ಹೊರಗಿಡಬೇಕು, ಅಂತಹ ಕ್ರಿಮಿನಲ್ ಗಳಿಗೆ ಮಸೀದಿಯ ದಫನ ಭೂಮಿಯಲ್ಲೂ ಕೊನೆಗೆ ಜಾಗ ನೀಡಬಾರದು, ಊರಿನಿಂದಲೇ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿ ‘ಚಾಲೆಂಜ್ ಫ್ರೆಂಡ್ಸ್ ಕೃಷ್ಣಾಪುರ ಹಾಗೂ ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಎನ್ನುವ ಹೆಸರಿನ ಮನವಿ ಪತ್ರಗಳು ಜಾಲತಾಣದಲ್ಲಿ ಹರಿದಾಡುತ್ತಿದೆ. ಇತರ ಇಬ್ಬರು ಆರೋಪಿಗಳ ಆರೋಪ ಸಾಬೀತಾದರೆ ಅವರನ್ನೂ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸಲಾಗಿದೆ. ಈತನ್ಮಧ್ಯೆ ಕೃಷ್ಣಾಪುರ ಕೇಂದ್ರ ಜುಮಾ ಮಸೀದಿ ಬಳಿಗೆ ಹಲವರು ಆಗಮಿಸಿ ಅಬ್ದುಲ್ ಸತ್ತಾರ್ ನನ್ನು ಬಹಿಷ್ಕಾರ ಹಾಕಲು ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.