ಮುಮ್ತಾಜ್ ಅಲಿ ನಿಗೂಢ ಕಣ್ಮರೆ ಹಿಂದೆ ಹನಿಟ್ರ್ಯಾಪ್.!?
ಮಂಗಳೂರು: ಉದ್ಯಮಿ ಮಮ್ತಾಜ್ ಅಲಿ ನಿಗೂಢ ಕಣ್ಮರೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಹನಿಟ್ರ್ಯಾಪ್ ಗೆ ಸಿಲುಕಿ ಮನನೊಂದು ಕಣ್ಮರೆಯಾಗಿದ್ದಾರೆ ಅನ್ನುವ ಸುದ್ದಿಯೂ ಹಬ್ಬಿದೆ. ಮಹಿಳೆಯೋರ್ವರು ಹಣಕ್ಕಾಗಿ ಮತ್ತು ಮದುವೆಯಾಗಬೇಕೆಂದು ಪೀಡಿಸುತ್ತಿದ್ದು ಆ ಮಹಿಳೆ ವಿಡಿಯೋ ಇಟ್ಟುಕೊಂಡು ಹನಿ ಟ್ರ್ಯಾಪ್ ರೀತಿಯಲ್ಲಿ ಬೆದರಿಸುತ್ತಿದ್ದು ಇದಕ್ಕೆ ಹಿಂದಿನಿಂದ ಕೆಲವರು ಸಹಕಾರ ನೀಡುತ್ತಿದ್ದರು ಎನ್ನುವ ಮಾತುಗಳು ಕೇಳಿ ಬಂದಿದೆ.

ಮಹಿಳೆ ಮತ್ತು ಇತರರ ನಿರಂತರ ಕಿರುಕುಳ, ಬೆದರಿಕೆಗೆ ಬೇಸತ್ತ ಮಮ್ತಾಜ್ ಅಲಿ ನಿಗೂಢವಾಗಿ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ.