ಇಳಂತಿಳ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲಾ ವಿದ್ಯಾರ್ಥಿನಿ ಕುಮಾರಿ ಸಲ್ವಾ ಚಾಂಪಿಯನ್
ಉಪ್ಪಿನಂಗಡಿ: ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಇಳಂತಿಳ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಲ್ವಾ ಅವರು 100, 200 ಮತ್ತು 400 ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.

ಕರಾಯ, ಪುತ್ತಿಲ, ಕುಪ್ಪೆಟ್ಟಿ ಈ ಕ್ಲಸ್ಟರ್ ನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಲ್ವಾ ಅವರು ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ಅಫ್ನಾನ್ ನುಸ್ಯೆಫ್ ಮತ್ತು ರೆಹಾನ್ ಸಿಮ್ರಾನ್ ರಿಲೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾಲಾ ಸಂಚಾಲಕ ರವುಫ್ ಯು ಟಿ ಮತ್ತು ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಇಕ್ಬಾಲ್ ಜೊಗಿಬೆಟ್ಟು ವಿಜೇತರನ್ನು ಅಭಿನಂದಿಸಿದರು.