ಕರಾವಳಿ

ಗಾಂಧಿ ಜಯಂತಿ ಪ್ರಯುಕ್ತ  ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಬೆಳ್ಳಿಪ್ಪಾಡಿ ಶಾಲೆಯಲ್ಲಿ ‘ಗಾಂಧಿ ನಡೆ ವಿದ್ಯಾರ್ಥಿಗಳ ಕಡೆ’ ಕಾರ್ಯಕ್ರಮ





ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಬೆಳ್ಳಿಪ್ಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮ ನಡೆಯಿತು.

ಸರ್ವ ಧರ್ಮಗಳ ಪ್ರಾರ್ಥನೆಯೊಂದಿಗೆ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜಿಯವರ ಭಾವ ಚಿತ್ರಕ್ಕೆ ಹೂಹಾಕಿ ದೀಪ ಬೆಳಗಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಆಚಾರ್ಯ ಉದ್ಘಾಟಿಸಿದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರ.ಕಾರ್ಯದರ್ಶಿ ಸುಮಂಗಲಾ ಶೆಣೈಯವರು ವಿದ್ಯಾರ್ಥಿಗಳಿಗೆ ಚಳುವಳಿ ಬಗ್ಗೆ ವಿವರಿಸಿದರು. ಬಳಿಕ ಗಾಂಧಿ ಹಾಡಿನ ಮೂಲಕ ರಂಜಿಸಿದರು. ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಬ್ಯಾಂಡ್ ಮೂಲಕ ಪಥಸಂಚಲನ ನಡೆಯಿತು.

ಶಾಲಾ ಮುಖ್ಯೋಪಾದ್ಯಾಯರಾದ ಯಶೋಧಾರವರು ವಿದ್ಯಾರ್ಥಿಗಳಿಗೆ ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿಯವರ ತತ್ವಗಳು ನಮ್ಮ ಹಾದಿ ಸುಗಮಗೊಳಿಸುವ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರ ಭವ್ಯ. ವಿ. ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ ಸದಸ್ಯರಾದ ಚೇತನಾ, ಪದ್ಮಶ್ರೀ ಮತ್ತು ರಾಜೀವಿ  ಉಪಸ್ಥಿತರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಹಡಗಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!