ಕರಾವಳಿ

ಬಂಟ್ವಾಳ: ಲಾರಿ ಹರಿದು ಯುವಕ ದಾರುಣ ಮೃತ್ಯು



ಬಂಟ್ವಾಳ : ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸಹ ಸವಾರನ ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ಡಿ.29ರಂದು ರಾತ್ರಿ ಬಿ.ಸಿ.ರೋಡ್ ಸರ್ಕಲ್ ಬಳಿ ನಡೆದಿದೆ.

ಸಾಂದರ್ಭಿಕ ಚಿತ್ರ

ಮೃತ ಯುವಕನನ್ನು ಬೆಂಗ್ರೆ ನಿವಾಸಿ ರಮೀಝ್ (20. ವ) ಎಂದು ಗುರುತಿಸಲಾಗಿದೆ. ಸ್ನೇಹಿತರಿಬ್ಬರು ಅಜಿಲಮೊಗರು ಉರೂಸ್ ಕಾರ್ಯಕ್ರಮಕ್ಕೆ ಹೋಗಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಸವಾರ ಸಜಾದ್ ಗಾಯಗೊಂಡಿದ್ದಾರೆ.

ಬಂಟ್ವಾಳ ಸಂಚಾರಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!