ರಾಜಕೀಯರಾಷ್ಟ್ರೀಯ

ದ್ವಿಚಕ್ರ ವಾಹನ ಖರೀದಿಸುವವರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ನೀಡಬೇಕು: ಸಚಿವ ನಿತಿನ್ ಗಡ್ಕರಿ ಮನವಿ



ನವದೆಹಲಿ: ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದ ಕಾರಣ ಅನೇಕ ಜನ ಸಾವನ್ನಪ್ಪುತ್ತಿದ್ದು, ದ್ವಿಚಕ್ರ ವಾಹನ ತಯಾರಕರು ವಾಹನವನ್ನು ಖರೀದಿಸುವವರಿಗೆ ರಿಯಾಯಿತಿ ಅಥವಾ ಸಮಂಜಸವಾದ ದರದಲ್ಲಿ ಹೆಲ್ಮೆಟ್ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, 2022ರಲ್ಲಿ ದೇಶದಲ್ಲಿ ಹೆಲ್ಮೆಟ್ ಧರಿಸದೇ ಇದ್ದ ಕಾರಣ ನಡೆದ ಅಪಘಾತಗಳಲ್ಲಿ 50,029 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. “ದ್ವಿಚಕ್ರ ವಾಹನ ತಯಾರಕರು ವಾಹನವನ್ನು ಖರೀದಿಸುವವರಿಗೆ ಹೆಲ್ಮೆಟ್‌ಗಳ ಮೇಲೆ ಸ್ವಲ್ಪ ರಿಯಾಯಿತಿ ನೀಡಿದರೆ ನಾವು ಜನರ ಜೀವ ಉಳಿಸಬಹುದು” ಎಂದಿದ್ದಾರೆ.

ಶಾಲಾ ಬಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಯೋಜಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು , ಭಾರೀ ದಂಡದೊಂದಿಗೆ ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆ-2019 ಜಾರಿಗೆ ಬಂದಿದೆಯಾದರೂ ಇಂತಹ ಕಾನೂನುಗಳ ಸಮರ್ಪಕ ಅನುಷ್ಠಾನ  ಬಹುದೊಡ್ಡ ಸವಾಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!