ಕರಾವಳಿ

ಪುತ್ತೂರಿನ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನಲ್ಲಿ ವಜ್ರಾಭರಣಗಳ ಬೃಹತ್ ಪ್ರದರ್ಶನ ಉದ್ಘಾಟನೆ

ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿಯಲ್ಲಿರುವ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಸೆ.5ರಿಂದ ಸೆ.15ರ ವರೆಗೆ ನಡೆಯಲಿರುವ ‘ವಿಶ್ವ ವಜ್ರ-ಡೈಮಂಡ್ ಎಕ್ಸಿಬಿಷನ್’ ವಜ್ರಾಭರಣಗಳ ಪ್ರದರ್ಶನ ಮೇಳಕ್ಕೆ ಸೆ.5ರಂದು ಚಾಲನೆ ನೀಡಲಾಯಿತು.

ವಜ್ರಾಭರಣಗಳ ಪ್ರದರ್ಶನವನ್ನು ಉದ್ಘಾಟಿಸಿದ ವೈದ್ಯೆ ಡಾ.ಹಬೀನಾ ಶಾಯಿರಾ ಮಾತನಾಡಿ ಸುಲ್ತಾನ್ ಡೈಮಂಡ್ ಗೋಲ್ಡ್ ಮಳಿಗೆಯಲ್ಲಿ ಅಭರಣಗಳ ಸಂಗ್ರಹವು ಬಹಳ ಚೆನ್ನಾಗಿದ್ದು ಇಲ್ಲಿನ ಸಿಬ್ಬಂದಿಗಳ ಸೇವೆಯೂ ಉತ್ತಮವಾಗಿದ್ದು ಗ್ರಾಹಕರಿಗೆ ಸಂತೃಪ್ತಿಯನ್ನು ನೀಡುವಂತಿದೆ ಎಂದು ಹೇಳಿದರು.

ವಜ್ರಾಭರಣಗಳ ಅನಾವರಣ: ಅತಿಥಿಗಳಾಗಿದ್ದ ವಿಕ್ಟೋರಿಯಾ ಝೋನಲ್ ಕ್ಲಬ್ ಸದಸ್ಯೆ ಆಶಾ ಡಿಸೋಜಾ, ಸುಶ್ಮಾ ವಿ ಜೈನ್ ವಿಜಯವನ, ಸುಮಯ್ಯ ನವಾಝ್ ಮತ್ತು ನಸ್ರತ್ ಬಶೀರ್, ಶಿಕ್ಷಕಿ ಇಂದಿರಾ ಭಂಡಾರಿ ಡೈಮಂಡ್ ಎಸ್ಪೋ ಪ್ರದರ್ಶನದ ವಿವಿಧ ಸಂಗ್ರಹಗಳನ್ನು ಬಿಡುಗಡೆಗೊಳಿಸಿದರು.

ಆಶಾ ಡಿಸೋಜ ಮಾತನಾಡಿ ನಾನು ಕಳೆದ 3 ವರ್ಷಗಳಿಂದ ಸುಲ್ತಾನ್ ಮಳಿಗೆಯ ಗ್ರಾಹಕಿಯಾಗಿದ್ದೇನೆ. ಇಲ್ಲಿ ಖರೀದಿಸಿದ ಚಿನ್ನಾಭರಣಗಳು ನನಗೆ ತೃಪ್ತಿ ನೀಡಿದೆ. ಗ್ರಾಹಕರು ಈ ಸಂಸ್ಥೆಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಶಿಕ್ಷಕಿ ಇಂದಿರಾ ಮಾತನಾಡಿ ಕಡಿಮೆ ಅವಧಿಯಲ್ಲಿ  ಸುಲ್ತಾನ್ ಸಂಸ್ಥೆಯು ತನ್ನಂತಹ ಹಲವಾರು ಗ್ರಾಹಕರ ಮನಸ್ಸು ಗೆದ್ದಿದ್ದು ಇಲ್ಲಿ ಗ್ರಾಹಕರ ಬೇಡಿಕೆಗಳಿಗೆ ಉತ್ತಮ ಸ್ಪಂಧನೆ ನೀಡುತ್ತಾರೆ ಎಂದು ಹೇಳಿದರು.

ಅನ್ಲೆನ್ ಡಿಸೋಜ ಮಾತನಾಡಿ ನಂಬಿಕೆ ಮತ್ತು ಭರವಸೆಗಳಿಗೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆ ಇನ್ನೊಂದು ಹೆಸರಾಗಿದೆ ಎಂದು ಹೇಳಿದರು.

10 ಸಾವಿರಕ್ಕೂ ಅಧಿಕ ಸಂಗ್ರಹ, ಅಮೋಘ ಡಿಸ್ಕೌಂಟ್: ಅತ್ಯಾಧುನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ ಇಟಲಿ, ಫ್ರಾನ್ಸ್, ಅಮೇರಿಕಾ, ಬೆಲ್ಜಿಯಂ, ಸಿಂಗಾಪುರ, ಟರ್ಕಿ ಶೈಲಿಯ ೪ಸಿ ಪರಿಪೂರ್ಣವಾದ ನೈಸರ್ಗಿಕ ವಜ್ರಾಭರಣಗಳ 10 ಸಾವಿರಕ್ಕೂ ಅಧಿಕ ಕ್ಯಾರೆಟ್‌ಗಳು ಲಭ್ಯವಿರಲಿದೆ. ಇದರಲ್ಲಿ ಪ್ರತೀ ಕ್ಯಾರೆಟ್ ಮೇಲೆ ೮ ಸಾವಿರ ರೂ. ಡಿಸ್ಕೌಂಟ್ ನೀಡಲಾಗುತ್ತದೆ. ಸೆ.5ರಿಂದ ಸೆ.15ರ ವರೆಗೆ ನಡೆಯುವ ಈ ಬೃಹತ್ ವಿಶ್ವ ವಜ್ರ ಡೈಮಂಡ್ ಎಕ್ಸ್‌ಪೋ ವೀಕ್ಷಿಸಲು ಮತ್ತು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. 

ವಜ್ರಾಭರಣಗಳ ಪ್ರದರ್ಶನದಲ್ಲಿ ಉನ್ನತ ಶ್ರೇಣಿಯ KYOMI ಐಷಾರಾಮಿ ಡೈಮಂಡ್, ಸಾಲಿಟೇರ್ ಕಲೆಕ್ಷನ್, ಸಾಂಪ್ರದಾಯಿಕ ಕ್ಲೋಸ್ ಸೆಟ್ಟಿಂಗ್ ಸಂಗ್ರಹ, ತನ್ಮಾನಿಯಾ ಸಂಗ್ರಹಗಳು, ವಧುವಿನ ವಜ್ರಾಭರಣಗಳ ಸಂಗ್ರಹ, ಕತ್ತರಿಸದ ವಜ್ರಗಳು ಮತ್ತು ರೂಬಿ ಎಮರಾಲ್ಡ್ ರತ್ನದ ಸಂಗ್ರಹಗಳು ಮತ್ತು ಕೈಗೆಟುಕುವ ದೈನಂದಿನ ಧರಿಸುವ ವಜ್ರದ ಸಂಗ್ರಹಗಳು ಲಭ್ಯವಿದೆ. 80 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಡೈಲಿವೇರ್ ಲೈಟ್‌ವೇಟ್ ಡೈಮಂಡ್ ನೆಕ್ಲೇಸ್‌ಗಳು, 35 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಲೈಟ್‌ವೇಟ್ ಡೈಮಂಡ್ ಬ್ಯಾಂಗಲ್, 8 ಸಾವಿರ ರೂ.ಗಳಿಂದ ಪ್ರಾರಂಭವಾಗುವ ಡೈಮಂಡ್ ರಿಂಗ್‌ಗಳು ಲೈಟ್‌ವೇಟ್ ಸಂಗ್ರಹದಲ್ಲಿ ಲಭ್ಯವಿದೆ.

ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಅಸಿಸ್ಟೆಂಟ್ ಮ್ಯಾನೇಜರ್ ಬಾಬು, ಮಾರ್ಕೆಟಿಂಗ್ ಮ್ಯಾನೇಜರ್ ಮುಹಮ್ಮದ್ ಅಮ್ರಾಝ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!