ಬಾಂಗ್ಲಾದೇಶ: ಪತ್ರಕರ್ತೆಯ ಶವ ಕೆರೆಯಲ್ಲಿ ಪತ್ತೆ
ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿರುವ ಹತಿರ್‌ಜೀಲ್ ಕೆರೆಯಲ್ಲಿ ಪತ್ರಕರ್ತೆಯೊಬ್ಬರ ಶವ ಪತ್ತೆಯಾಗಿದೆ. ರಾಜಧಾನಿ ಢಾಕಾದಲ್ಲಿ ಈ ಘಟನೆ ನಡೆದಿದ್ದು, ಮಾಧ್ಯಮಗಳ ವರದಿಯ ಪ್ರಕಾರ, ಗಾಜಿ ಸಮೂಹದ ಬಂಗಾಳಿ ಭಾಷೆಯ ಗಾಜಿ ಎಂಬ ಉಪಗ್ರಹ ಮತ್ತು ಕೇಬಲ್ ದೂರದರ್ಶನ ಚಾನೆಲ್ ನ ಸಂಪಾದಕಿ ಸಾರಾ ರಹನುಮಾ ಮೃತ ಪತ್ರಕರ್ತೆಯಾಗಿದ್ದಾರೆ.

ಢಾಕಾದಲ್ಲಿರುವ ಹತಿರ್‌ಜೀಲ್ ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮೃತದೇಹವನ್ನು ಕೆರೆಯಿಂದ ತೆಗೆದು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಸಾಯುವ ಮೊದಲು, ಸಾರಾ ಮಂಗಳವಾರ ರಾತ್ರಿ ತನ್ನ ಫೇಸ್‌ಬುಕ್‌ನಲ್ಲಿ ಫಹೀಮ್ ಫೈಸಲ್ ಎಂಬಾತನನ್ನು ಟ್ಯಾಗ್ ಮಾಡಿ ಸ್ಟೇಟಸ್ ಪೋಸ್ಟ್ ಮಾಡಿದ್ದರು. “ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸುತ್ತಾನೆ. ನೀವು ಶೀಘ್ರದಲ್ಲೇ ನಿಮ್ಮ ಎಲ್ಲಾ ಕನಸುಗಳನ್ನು ಪೂರೈಸುವಿರಿ ಎಂದು ಭಾವಿಸುತ್ತೇವೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳನ್ನು ಹೊಂದಿದ್ದೆವು ಎಂದು ನನಗೆ ತಿಳಿದಿದೆ. ಕ್ಷಮಿಸಿ, ನಮ್ಮ ಯೋಜನೆಗಳನ್ನು ಪೂರೈಸಲು ಸಾಧ್ಯವಿಲ್ಲ. ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಅವರು ಬರೆದಿದ್ದರು.
ಆದರೆ, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪುತ್ರ ಸಜೀಬ್ ವಾಝೇದ್ ಪ್ರತಿಕ್ರಿಯೆ ನೀಡಿದ್ದು, ಇದು ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಮತ್ತೊಂದು ಕ್ರೂರ ದಾಳಿ ಎಂದು ಹೇಳಿದ್ದಾರೆ.