ಕರಾವಳಿ

ಆಡಿಯೋ ವೈರಲ್ ವಿಚಾರ: ಕೊನೆಗೂ ಮೌನ ಮರಿದ ಪುತ್ತಿಲ

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೋ ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಕುರಿತಾಗಿ ಕೊನೆಗೂ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಮತ್ತು ನಂತರ ನಡೆದಿರುವ ಆರೋಪ ಪ್ರತ್ಯಾರೋಪಗಳು ಎಲ್ಲವೂ ಜನತೆಯ ಮುಂದಿರುವುದು ನಮಗೆಲ್ಲ ತಿಳಿದ ವಿಚಾರ. ಚುನಾವಣಾ ಸಂದರ್ಭದಲ್ಲಿ 3.5 ಕೋಟಿ ರೂಪಾಯಿ ವ್ಯವಹಾರದ ಆಪಾದನೆ ಮತ್ತು ನಾನು ಅದರ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಹೇಳಿರುವ ವಿಚಾರಕ್ಕೆ ಇಂದು ಕೂಡ ಬದ್ಧನಾಗಿದ್ದೇನೆ.

ಆದರೆ ಈ ರೀತಿಯಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ನಾನು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ರಾಜಕೀಯ ಷಡ್ಯಂತರಗಳು ನಡೆಯುವ ಬಗ್ಗೆ ನಾನು ಹಿರಿಯರ ಹಾಗೂ ಅಧಿಕಾರಿಗಳ ಸೂಚನೆಯಂತೆ ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯುತ್ತೇನೆ ಎಂದು
ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!