ಕಾರ್ಕಳ: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ- ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ
ಕಾರ್ಕಳ: ಕೌಡೂರು ರಂಗನಪಲ್ಕೆ ಸಮೀಪ ಆ. 23ರಂದು ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಕಾರ್ಕಳ ನಗರ ಠಾಣೆಯಲ್ಲಿ ಅಲ್ತಾಫ್ ಹಾಗೂ ಇನ್ನಿಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯ ಆರೋಪಿ ಅಲ್ತಾಫ್ ಎಂಬಾತನಿಗೆ ಸುಮಾರು ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಸಂತ್ರಸ್ಥ ಯುವತಿಯ ಪರಿಚಯವಾಗಿತ್ತು. ಆ. 23ರಂದು ಮಧ್ಯಾಹ್ನ ಅಲ್ತಾಫ್ ಕಾರಿನಲ್ಲಿ ಅಯ್ಯಪ್ಪ ನಗರದಿಂದ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕೌಡೂರು ಗ್ರಾಮದ ರಂಗನಪಲ್ಕೆಯ ಕಾಡಿಗೆ ಕಾರಿನಲ್ಲಿ ಹೋಗಿದ್ದು, ಅಲ್ಲಿಗೆ ಇತರ ಇಬ್ಬರು ಕಾರಿನಲ್ಲಿ ಬಂದು ಬಿಯರ್ ಬಾಟಲಿ ತಂದುಕೊಟ್ಟಿದ್ದಾರೆ. ಅಲ್ತಾಫ್ ಬಿಯರ್‌ಗೆ ಮಾದಕ ವಸ್ತು ಬೆರೆಸಿ ಬಲವಂತವಾಗಿ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೋರ್ವನ ಸೆರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿಯನ್ನು ಶುಕ್ರವಾರವೇ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.