ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿಯರಿಂದ ಹೆಣ್ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ
ಪುತ್ತೂರು: ಮಧುರಾ ಇಂಟರ್ನ್ಯಾಷನಲ್ ಸ್ಕೂಲ್ ಮೇನಾಲ ಇಲ್ಲಿ ಶಾಲಾ ವಿದ್ಯಾರ್ಥಿನಿಯರಿಂದ ಮಹಿಳೆ ಮತ್ತು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ನಡೆಯಿತು.
“ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣಬೇಕು. ಆದರೆ ಕೋಲ್ಕತ್ತಾದ ಆರ್.ಜಿ.ಆರ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಅಮಾನವೀಯ ಕೃತ್ಯವಾಗಿದೆ. ದೇಶದ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ.
“ಹೆಣ್ಣುಮಕ್ಕಳ ಸುರಕ್ಷತೆ ನಮ್ಮ ಹೊಣೆ”, ” ನ್ಯಾಯಕ್ಕಾಗಿ ಹೋರಾಡೋಣ” ಎಂದು ಉಲ್ಲೇಖಿತವಾಗಿರುವ ಪೋಸ್ಟರ್ ಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿನಿಗಳು ವೈದ್ಯೆಯ ಹತ್ಯೆ ಮತ್ತು ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾವೆಲ್ಲರೂ ಒಂದಾಗಿ ಆರೋಪಿಯ ಕಠಿಣ ಶಿಕ್ಷೆಗಾಗಿ ಒತ್ತಾಯಿಸುತ್ತೇವೆ. ನಮ್ಮ ಹೋರಾಟ ನ್ಯಾಯಕ್ಕಾಗಿ ಎಂದು ಅವರು ಹೇಳಿದರು.
ದೇಶದಲ್ಲಿ ಪದೇ ಪದೇ ನಡೆಯುವ ಇಂತಹ ಕೃತ್ಯದಿಂದ ಮಾನಸಿಕ, ಆಂತರಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಕಾನೂನಾತ್ಮಕವಾಗಿ ಹೊಸ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಬೇಕೆಂಬ ಆಶಯವನ್ನು ವಿದ್ಯಾರ್ಥಿನಿಯರು ವ್ಯಕ್ತಪಡಿಸಿದರು.