ರಾಜ್ಯಪಾಲರ ವಿರುದ್ಧ ಐವನ್ ಡಿಸೋಜಾರಿಂದ ವಿವಾದಾತ್ಮಕ ಹೇಳಿಕೆ ಆರೋಪ: ಬಿಜೆಪಿ ಕಿಡಿ
ಮಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ನೀಡಿದ್ದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ದೂರು ನೀಡಿದೆ. ಆದರೆ ಐವನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲಾಗದ್ದಕ್ಕೆ
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು 24 ಗಂಟೆ ಗಡುವು ನೀಡಿದ್ದಾರೆ.
ಇಂದು ಸಂಜೆಯೊಳಗೆ ಎಫ್ಐಆರ್ ದಾಖಲು ಮಾಡುವಂತೆ ಆಗ್ರಹಿಸಿದ್ದು, ಒಂದು ವೇಳೆ ದಾಖಲು ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.