ಕರಾವಳಿಕ್ರೈಂ

ದ್ವಿಚಕ್ರ ವಾಹನ ಸವಾರನ ಮೇಲೆ ಕಾಡು ಹಂದಿ ದಾಳಿ



ಪುತ್ತೂರು: ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಆ.20 ರ ಬೆಳಗ್ಗಿನ ಜಾವ ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.

ಕುಂಬ್ರ ಪೆಟ್ರೋಲ್ ಪಂಪ್ ನ ಮ್ಯಾನೇಜ‌ರ್ ಧನುಷ್ ಗಾಯಗೊಂಡ ಯುವಕ. ಧನುಷ್‌ ಎಂದಿನಂತೆ ಬೆಳಿಗ್ಗೆ ಸ್ಕೂಟರ್ ನಲ್ಲಿ ಕುಂಬ್ರ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದ ವೇಳೆ ಕಾಡು ಹಂದಿಯೊಂದು ಸ್ಕೂಟರ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್‌ ಮೇಲೆ ಎರಗಿ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದಲ್ಲದೆ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!