ಕರಾವಳಿರಾಜಕೀಯರಾಜ್ಯ

ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವಂತೆ ಸದನದಲ್ಲಿ ಆಗ್ರಹಿಸಿದ ಶಾಸಕ ಅಶೋಕ್ ರೈ



ಪುತ್ತೂರು: ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಎಸ್ ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರ ಮಾಡುವ ಮೂಲಕ ಜನರಿಗೆ ಸಹಾಯವಾಗುವಂತೆ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದರು. ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಸಾರ್ವಜನಿಕರು ಎಸ್ ಪಿ ಕಚೇರಿಗೆ ತೆರಳಬೇಕಾದರೆ ಮಂಗಳೂರಿಗೆ ತೆರಳಬೇಕು ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲವಾಗುತ್ತದೆ. ಸುಳ್ಯದಿಂದ ಅಥವಾ ಕಡಬದಿಂದ ಮಂಗಳೂರಿಗೆ ತೆರಳಲು ತುಂಬಾ ದೂರವಾಗುತ್ತದೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದಲೂ ಎಸ್ ಪಿ ಕಚೇರಿ ಸ್ಥಳಾಂತರವಾದರೆ ಪ್ರಯೋಜನವಾಗುತ್ತದೆ ಎಂದು ಸದನದಲ್ಲಿ ತಿಳಿಸಿದರು.

ಸದ್ಯಕ್ಕೆ ಸ್ಥಳಾಂತರವಿಲ್ಲ: ಗೃಹಸಚಿವರಿಂದ ಸ್ಷಷ್ಟನೆ: ಮಂಗಳೂರು ಕೆಂದ್ರೀಕೃತವಾಗಿರುವ ಜಿಲ್ಲಾ ಎಸ್ ಪಿ ಕಚೇರಿಯನ್ನು ಸದ್ಯಕ್ಕೆ ಪುತ್ತೂರಿಗೆ ಸ್ಥಳಾಂತರ ಮಾಡುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ, ಜಿಪಂ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಕಚೇರಿಗಳು ಮಂಗಳೂರಿನಲ್ಲೇ ಇರುವಾಗ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಯನ್ನು ಮಾತ್ರ ಪುತ್ತೂರಿಗೆ ಸ್ಥಳಾಂತರ ಮಾಡುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಕಚೇರಿಗೆ ಸಾರ್ವಜನಿಕರು ಮಂಗಳೂರಿಗೆ ಬರುವುದರಿಂದ ಎಸ್ ಪಿ ಕಚೇರಿಯೂ ಅಲ್ಲೇ ಇರುವುದು ಸೂಕ್ತವಾಗುತ್ತದೆ ಎಂದ ಗೃಹ ಸಚಿವ ಪರಮೇಶ್ವರ್ ಮುಂದೆ ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಎಂದು ಸಭೆಯಲ್ಲಿ ತಿಳಿಸಿದರು. ಪುತ್ತೂರಿನಲ್ಲಿ ಸಹಾಯಕ ಅಧೀಕ್ಷಕರ ಕಚೇರಿ ಈಗಾಗಲೇ ಕಾರ್ಯಾಚರಿಸುತ್ತಿರುವುದರಿಂದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಾವು ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಡಿಎಆರ್ ಪುತ್ತೂರಿಗೆ ಸ್ಥಳಾಂತರ: ಡಿಸ್ಟ್ರಿಕ್ಟ್ ಆರ್ಮ್ ರಿಸರ್ವ್ ಪೊಲೀಸ್ ವ್ಯವಸ್ಥೆಯನ್ನು ಪುತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಶಾಸಕರು ಸದನದಲ್ಲಿ ಮನವಿ ಮಾಡಿದ್ದು , ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ವ್ಯವಸ್ಥೆ ತುಂಬಾ ಪ್ರಯೋಜನವಾಗಲಿದೆ. ಪುತ್ತೂರು ಹಾಗೂ ಇತರೆ ತಾಲೂಕುಗಳಲ್ಲಿ ಅಶಾಂತಿಯ ವಾತಾವರಣ ಕಂಡು ಬಂದಾಗ ಮಂಗಳೂರಿನಿಂದ ಡಿಎಆರ್ ಬರುಬೇಕಾಗಿದ್ದು ಸುಮಾರು 2 ಗಂಟೆ ತಡವಾಗಿ ಸ್ಥಳಕ್ಕೆ ಡಿಎಆರ್ ಬರುವುದರಿಂದ ಡಿಎಆರ್ ಪುತ್ತೂರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಎಚ್ ಜಿ ಪರಮೇಶ್ವರ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!