ಪ್ಯಾರಿಸ್ ಒಲಿಂಪಿಕ್ಸ್’ಗೆ ತೆರೆ: 126 ಪದಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದ ಅಮೆರಿಕ
ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ, ಜಾಗತಿಕ ಕ್ರೀಡಾ ಪ್ರೇಮಿಗಳನ್ನು ರಂಜಿಸಿದ್ದ 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆ.11ರಂದು ರಾತ್ರಿ ಸಂಭ್ರಮದ ತೆರೆ ಬಿದ್ದಿದೆ.
17 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 10,500 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದರು. ಅಮೆರಿಕ 40 ಚಿನ್ನ ಸೇರಿದಂತೆ 126 ಪದಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿತು. ಚೀನ ಕೂಡ 40 ಚಿನ್ನ ಜಯಿಸಿದ್ದು ಒಟ್ಟು 91 ಪದಕಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. 1 ಬೆಳ್ಳಿ, 5 ಕಂಚು ಸೇರಿದಂತೆ 6 ಪದಕಗಳನ್ನು ಗೆದ್ದ ಭಾರತ 71ನೇ ಸ್ಥಾನಕ್ಕೆ ತೃಪ್ತಿಪಟ್ಟಿತು .