ಇಳಂತಿಲ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್: ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಪುನರಾಯ್ಕೆ
ಉಪ್ಪಿನಂಗಡಿ: ಇಳಂತಿಲ ವಿದ್ಯಾನಗರ ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಮೊದಲನೇ ಶಿಕ್ಷಕ- ರಕ್ಷಕ ಸಮಿತಿಯ ಮಹಾಸಭೆ ಆ.10 ರಂದು ನಡೆಯಿತು.
ಶಿಕ್ಷಕ- ರಕ್ಷಕ ಸಮಿತಿಯ ಅಧ್ಯಕ್ಷರಾಗಿ ಮೊಹಮ್ಮದ್ ಇಕ್ಬಾಲ್ ಜೋಗಿಬೆಟ್ಟು ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶುಕೂರು ಮೇದರಬೆಟ್ಟು, ಕೋಶಾಧಿಕಾರಿಯಾಗಿ ಮಜೀದ್ ಮಠ ಆಯ್ಕೆಯಾದರು.
ಶಾಲಾ ಸಂಚಾಲಕ ರವೂಫ್ ಯು ಟಿ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪೋಷಕರ ಸಹಕಾರ ಪ್ರಮುಖವಾಗಿದೆ ಎಂದರು. ಪ್ರಾಂಶುಪಾಲ ಇಬ್ರಾಹಿಂ ಕಲೀಲ್ ಪ್ರಾಸ್ತಾವಿಕ ಮಾತನಾಡಿ ಮಕ್ಕಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕಿ ಶ್ರೀಮತಿ ಅರುಣಾ ಮಂಡಿಸಿದರು. ತಾಹಿರ ಸ್ವಾಗತಿಸಿದರು. ಶಮೀನಾ ಕಾರ್ಯಕ್ರಮ ಸಂಯೋಜಿಸಿದರು. ಬಲ್ಕೀಸ್ ಬಾನು ವಂದಿಸಿದರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಉಷಾ ಉಪಸ್ಥಿತರಿದ್ದರು.