ಕ್ರೈಂಜಿಲ್ಲೆ

ಪಂಪ್‌ಸೆಟ್‌ ದುರಸ್ತಿ ವೇಳೆ ವಿದ್ಯುತ್ ಆಘಾತ: ತಂದೆ ಮಗ ಸಾವು

ಹಾವೇರಿ: ಜಮೀನಿನಲ್ಲಿ ಪಂಪ್‌ಸೆಟ್‌ ದುರಸ್ತಿ ಮಾಡಲು ಹೋಗಿದ್ದ ವೇಳೆ ವಿದ್ಯುತ್ ತಗುಲಿ ತಂದೆ ಮತ್ತು ಮಗ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ.

ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರು ಸ್ಟಾರ್ಟ್ ಮಾಡಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ವಿದ್ಯುತ್‌ ಆಘಾತದಿಂದ ತಂದೆ-ಮಗ ಪಂಪಸೆಟ್ ಮೇಲೆಯೇ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ.ಮೃತರನ್ನು ಕರಬಸಪ್ಪ‌ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ (26) ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!