ವಯನಾಡ್ ದುರಂತ: 1000 ಎಸ್.ಡಿ.ಪಿ.ಐ ಸ್ವಯಂ ಸೇವಕರ ತಂಡದಿಂದ ಸತತ ಕಾರ್ಯಾಚರಣೆ
ವಯನಾಡ್: ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರವಾಹ 350ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು ಅಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಧಾವಿಸಿರುವ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಜೊತೆ ಎಸ್.ಡಿ.ಪಿ.ಐಯ ಸ್ವಯಂ ಸೇವಕರು ಸ್ಥಳೀಯರು ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ.
500 ಮಂದಿ ಎಸ್ ಡಿಪಿಐ ಸ್ವಯಂಸೇವಕರು ವಯನಾಡ್‌ನಲ್ಲಿ ದುರಂತ ಸಂಭವಿಸಿದ ಮೊದಲ ದಿನದಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು ಮತ್ತೆ 500 ಸ್ವಯಂಸೇವಕರನ್ನು ರಕ್ಷಣಾ ಕಾರ್ಯಗಳಿಗಾಗಿ ಎಸ್ ಡಿಪಿಐ ನಿಯೋಜಿಸಿದೆ. ಆ ಮೂಲಕ ಒಟ್ಟು 1000 ಎಸ್.ಡಿ.ಪಿ.ಐ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ
ಚಾಲಿಯಾರ್ ನದಿಯ ಎರಡು ಬದಿಗಳಲ್ಲಿ, ಬ್ಯಾಚ್ ಒಂದಕ್ಕೆ ತಲಾ 20 ಜನರಂತೆ, ನಿಯೋಗಿಸಿ, ನದಿ ಬದಿಗಳಲ್ಲಿ ಸಿಲುಕಿರಬಹುದಾದ ಮೃತ ದೇಹಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಮೃತದೇಹವನ್ನು ಸಾಗಿಸಲು ಮತ್ತು ಬಳಿಕದ ಪ್ರಕ್ರಿಯೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ಅಗತ್ಯ ನೆರವು ಕೂಡ ನೀಡುತ್ತಿದ್ದಾರೆ. ಅಪಾಯಕಾರಿ ಪರಿಸ್ಥಿತಿಯಲ್ಲೂ ತ್ವರಿತ ಗತಿಯಲ್ಲಿ ಪ್ರಾರಂಭದಿಂದಲೇ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಸ್.ಡಿ.ಪಿ.ಐ ಸ್ವಯಂಸೇವಕರ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.