ಉಮ್ರಾ ಯಾತ್ರೆಗೆ ತೆರಳಿದ ಕೊಡಗಿನ ಯುವಕ ಮೆಕ್ಕಾದ ಹೊಟೇಲ್ ನಲ್ಲಿ ಮೃತ್ಯು
ಉಮ್ರಾ ಯಾತ್ರೆಗೆ ತೆರಳಿದ್ದ ಕೊಡಗಿನ ಯುವಕ ಮೆಕ್ಕಾದ ಸಮೀಪದ ಹೊಟೇಲ್ ನಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಮೂಲದ ರಫೀಕ್ ಹಸನ್(34) ಎಂದು ತಿಳಿದು ಬಂದಿದೆ.
ಹಲವಾರು ವರ್ಷಗಳಿಂದ ಮೃತ ವ್ಯಕ್ತಿ ಸೌದಿ ಅರೇಬಿಯದ ದಮಾಮಿನಲ್ಲಿ ಉದ್ಯೋಗದಲ್ಲಿದ್ದು ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿ ಪತ್ನಿ ಮತ್ತು ಮಕ್ಕಳೊಂದಿಗೆ ದಮಾಮಿನಲ್ಲಿ ವಾಸಿಸುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ದಮ್ಮಾಮ್ ನಿಂದ ಮದೀನಾ ಮತ್ತು ಮೆಕ್ಕಾಗೆ ಉಮ್ರಾ ನಿರ್ಮಿಸಲು ರಫೀಕ್ ತೆರಳಿದ್ದು, ಮೆಕ್ಕಾದ ಬಳಿ ಹೊಟೇಲ್ ನಲ್ಲಿ ತಂಗಿದ್ದರು.
ಈ ವೇಳೆ ನಿದ್ರೆಯಲ್ಲಿರುವಾಗ ಮೃತಪಟ್ಟಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ರಫೀಕ್ ಎದ್ದೇಳದಿದ್ದಾಗ ಆತನ ಗೆಳೆಯರು ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಮೃತದೇಹವನ್ನು ಕಿಂಗ್ ಫೈಸಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೃತ ಫೈಸಲ್ ಪತ್ನಿ ಮತ್ತು ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.