ಉಪ್ಪಿನಂಗಡಿ: ವಿದ್ಯಾರ್ಥಿ ಮೃತ್ಯು
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ (17ವ) ಧಿಡೀರ್ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಆ.3ರಂದು ನಡೆದಿದೆ.
ಗಂಡಿಬಾಗಿಲು ನಿವಾಸಿ ಸಿರಾಜುದ್ದೀನ್ ಕಾಲೇಜಿಗೆಂದು ಬೆಳಿಗ್ಗೆ ತನ್ನ ಗೆಳೆಯರೊಂದಿಗೆ ಹೊರಟು ಬಂದಿದ್ದು, ಕಾಲೇಜಿನ ದಾರಿ ಮಧ್ಯೆ ತಲೆ ತಿರುಗಿ ಬಿದ್ದಿದ್ದ ಎನ್ನಲಾಗಿದೆ. ಕೂಡಲೇ ಈತನ ಜೊತೆಗಿದ್ದ ಸ್ನೇಹಿತರು ಸಿರಾಜುದ್ದೀನ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಿ.ಪಿ. ಲೋ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ.