ಕರಾವಳಿ

ಮುರ ಅಲ್-ಶಿಫಾ ರಿಲೀಫ್ ಫೌಂಡೇಷನ್ ಗೆ ಪದಾಧಿಕಾರಿಗಳ ಆಯ್ಕೆ



ಪುತ್ತೂರು: ಬಡ ರೋಗಿಗಳ ಸಹಾಯಾರ್ಥ ರಚಿಸಲ್ಪಟ್ಟ ಅಲ್-ಶಿಫಾ ರಿಲೀಫ್ ಫೌಂಡೇಷನ್ ಮುರ ಸಂಸ್ಥೆಯ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಸಲೀಂ ಹಾಜಿ ಪೋಳ್ಯ ನೇತೃತ್ವದಲ್ಲಿ ಅಲ್-ಶಿಫಾ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಅಲ್-ಶಿಫಾ ರಿಲೀಫ್ ಫೌಂಡೇಷನ್ ಇದರ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಕರೀಂ ಬೀಟಿಗೆ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಮುರ ಹಾಗೂ ಕೋಶಾಧಿಕಾರಿಯಾಗಿ ಸಲೀಂ ರಹ್ಮಾನ್ ಪಡ್ಡಾಯೂರು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶರೀಫ್ ಬೀಟಿಗೆ, ಕಾರ್ಯದರ್ಶಿಯಾಗಿ ಸಜ್ಜಾದ್ ಮುರ, ಸಂಘಟನಾ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಪೋಳ್ಯ ಅವರನ್ನು ಆಯ್ಕೆ ಮಾಡಲಾಯಿತು. ಮೆಡಿಕಲ್ ಸಲಕರಣಾ ನಿರ್ವಾಹಕರಾಗಿ ನಾಸಿರ್ ಬೀಟಿಗೆ, ಮಾದ್ಯಮ ನಿರ್ವಾಹಕರಾಗಿ ಸದ್ದಾಂ ಮುರ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು 22 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಅಯ್ಯೂಬ್ ಖಾನ್ ಮುರ ವರದಿ ಮಂಡಿಸಿದರು, ಸಿದ್ದೀಕ್ ಬೀಟಿಗೆ ಸ್ವಾಗತಿಸಿದರು. ಸಮೀರ್ ಮುರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!