ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ, ಜೆಡಿಎಸ್ ಶಾಸಕರಿಂದ ಧರಣಿ
ಬೆಂಗಳೂರು: ಸದನದಲ್ಲಿ ಮುಡಾ ಹಗರಣದ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದರೂ ರಾತ್ರಿಯಿಡೀ ಸದನದಲ್ಲಿಯೇ ಉಳಿದಿರುವ ಶಾಸಕರು, ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು.
ವಿಧಾನಸೌಧದ ಕಾರಿಡಾರ್ಗಳಲ್ಲಿ ಕುಳಿತು ಹಾಡು, ಭಜನೆ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿದರು. ವಿಪಕ್ಷ ನಾಯಕ ಆರ್ ಅಶೋಕ ವಾದ್ಯ ಮತ್ತು ಸಿಟಿ ರವಿ ತಾಳಕ್ಕೆ ಶಾಸಕ ಪ್ರಭು ಚವ್ಹಾಣ್ ಹೆಜ್ಜೆ ಹಾಕಿದರು. ‘ಸಮಾಜವಾದ ಅಂತಾರೆ ಮಜಾವನ್ನೇ ಮಾಡ್ತಾರೆ, ದಲಿತರ ಹಣವನ್ನು ನುಂಗ್ತಾರೆ ಎಂದು ಹೇಳಿದರು.