ಪುಣಚ: 16 ಬೋರ್‌ವೆಲ್ ಪಂಪ್ ಕಳ್ಳತನ, ಪ್ರಕರಣ ದಾಖಲು
ಪುತ್ತೂರು: 16 ಬೋರ್‌ವೆಲ್ ಪಂಪ್ ಗಳನ್ನು ಯಾರೋ ಕದ್ದೊಯ್ದ ಘಟನೆ ಬಂಟ್ವಾಳ ತಾಲ್ಲೂಕಿನ ಪುಣಚದಲ್ಲಿ ನಡೆದಿದೆ.

ಪುಣಚದ ಗಣೇಶ ಗೌಡ ಎಂಬವರು ತನ್ನ ಮನೆಯ ಬಳಿಯಿರುವ ಕಟ್ಟಡದಲ್ಲಿ, ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಇರಿಸಿದ್ದ, ಒಟ್ಟು 16 ಬೋರ್‌ವೆಲ್ ಪಂಪ್ ಗಳನ್ನು, ಜು.21 ರಂದು ರಾತ್ರಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಕಳವಾದ ಬೋರ್‌ವೆಲ್ ಪಂಪ್‌ಗಳ ಒಟ್ಟು ಅಂದಾಜು ಮೌಲ್ಯ 1,81,000/- ರೂಪಾಯಿ ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 119/2024, ಕಲಂ: 303 (2) BNS ರಂತೆ ಪ್ರಕರಣ ದಾಖಲಾಗಿದೆ.