ಅಂತಾರಾಷ್ಟ್ರೀಯ

ಇಥಿಯೋಪಿಯಾದಲ್ಲಿ ಭೂ ಕುಸಿತ:  229 ಮಂದಿ ಸಾವು

ಇಥಿಯೋಪಿಯಾದಲ್ಲಿ ಭೂ ಕುಸಿತವಾಗಿ 229 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅವರಲ್ಲಿ ಹಲವು ಜನರು ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ತಡರಾತ್ರಿ ಈ ಭೂಕುಸಿತದಲ್ಲಿ 55 ಜನ ಮೃತಪಟ್ಟಿದ್ದರು. ಸಾವಿನ ಸಂಖ್ಯೆ 229ಕ್ಕೆ ಏರಿದೆ. ಇನ್ನೂ ಮಣ್ಣಿನ ಅಡಿಯಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಗೋಫಾ ವಲಯವು ಕೆಸರುಗದ್ದೆಗಳು ತುಂಬಿರುವ ಪ್ರದೇಶವಾಗಿದೆ.

Leave a Reply

Your email address will not be published. Required fields are marked *

error: Content is protected !!