ರಾಷ್ಟ್ರೀಯ

ರಸ್ತೆಗೆ ಕುಸಿದ ಕಂಪೌಂಡ್ ಗೋಡೆ: ಕೂದಲೆಳೆ ಅಂತರದಲ್ಲಿ ಪಾರಾದ ವಿದ್ಯಾರ್ಥಿನಿ..!



ಕಾಂಪೌಂಡ್ ಗೋಡೆ ರಸ್ತೆಗೆ ಕುಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅಪಾಯದಿಂದ ಪಾರಾಗಿರುವ ಘಟನೆ ಕೇರಳ ಕಣ್ಣೂರಿನ ಅಂಜರಕಂಡಿಯಲ್ಲಿ ಜು.18ರಂದು ನಡೆದಿದೆ.

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋದಲ್ಲಿ ಗೋಡೆ ಕುಸಿಯುವ ಶಬ್ದವನ್ನು ಕೇಳಿದ ವಿದ್ಯಾರ್ಥಿನಿ ತಕ್ಷಣ ರಸ್ತೆಯ ಮತ್ತೊಂದು ಬದಿಗೆ ಓಡಿ ಹೋಗಿದ್ದು ವಿದ್ಯಾರ್ಥಿನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾಳೆ. ವಿದ್ಯಾರ್ಥಿನಿ ಓಡುವ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಇರುತ್ತಿದ್ದರೂ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಕಂಪೌಂಡ್ ಗೋಡೆ ಬೀಳುವ ಅಲ್ಪ ಮುನ್ನ ಇದೇ ಸ್ಥಳದಿಂದ ವಿದ್ಯಾರ್ಥಿಗಳು ಹೋಗಿದ್ದು ಹಿಂದಿನಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!