ದ.ಕ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಶಾಸಕ ಎನ್ನುವ ಕೀರ್ತಿಗೆ ಪಾತ್ರವಾದ ಯು.ಟಿ ಖಾದರ್
ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಮಂಗಳೂರು ಶಾಸಕ, ಮಾಜಿ ಸಚಿವರು ಆಗಿರುವ ಯು ಟಿ ಖಾದರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಶಾಸಕ ಎಂಬ ಕೀರ್ತಿಗೆ ಯು ಟಿ ಖಾದರ್ ಭಾಜನರಾಗಿದ್ದಾರೆ. ಈ ಹಿಂದೆ ಬೆಳ್ತಂಗಡಿ ಕ್ಷೇತ್ರದಿಂದ ಚುನಾಯಿತರಾಗಿದ್ದ ಬಿ ವೈಕುಂಠ ಬಾಳಿಗಾ ಎರಡು ಬಾರಿ ಸಭಾಧ್ಯಕ್ಷರಾಗಿದ್ದರು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಯು.ಟಿ ಖಾದರ್ ಭಾಜನರಾಗಿದ್ದಾರೆ