ಬೆಳ್ತಂಗಡಿ: ವಾಟ್ಸಾಪ್’ಗೆ ಬಂದ ಮೆಸೇಜ್ ಲಿಂಕ್ ಓಪನ್ ಮಾಡಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಬೆಳ್ತಂಗಡಿ: ಯಾವುದೇ ಓಟಿಪಿ ನೀಡದಿದ್ದರೂ ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಬಲ್ಲಿ ನಡೆದಿದೆ.

ಶ್ರೀನಾಥ ಬಿ ವಂಚನೆಗೆ ಒಳಗಾದ ವ್ಯಕ್ತಿ. ಶ್ರೀನಾಥ್ ಬಿ ಅವರ ದೂರಿನಂತೆ ‘ತಮ್ಮ ಮನೆಯಲ್ಲಿ ಇದ್ದ ವೇಳೆ ವಾಟ್ಸಾಫ್ ಗೆ ಅವರ ಬ್ಯಾಂಕಿಗೆ ಸಂಬಂಧಿಸಿರುವಂತೆ ಮೆಸೆಜ್ ಬಂದಿರುತ್ತದೆ. ಆ ಮೆಸೇಜ್ ನಲ್ಲಿದ್ದ ಲಿಂಕ್ ನ್ನು ಶ್ರೀನಾಥ ರವರು ಓಪನ್ ಮಾಡಿದ ತಕ್ಷಣ ವಾಟ್ಸಾಫ್ ಬ್ಲಾಕ್ ಆಗಿರುತ್ತದೆ. ಬಳಿಕ ಯಾವುದೇ ಓಟಿಪಿ ನೀಡದಿದ್ದರೂ, ಇವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂ ಹಣವನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾನೆ ಎಂಬ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.