ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ವಿಭಾಗದ ಕ್ಯಾಂಪಸ್ ಚುನಾವಣೆ
ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ 2024-25 ನೇ ಶೈಕ್ಷಣಿಕ ವರ್ಷದ ಪದವಿಪೂರ್ವ ವಿಭಾಗದ ಕಾಲೇಜು ಚುನಾವಣೆ ವ್ಯವಸ್ಥಿತವಾಗಿ ನೆರವೇರಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಸ್ಮತ್, ಹಲೀಮಾ ತಸ್ಲೀಮಾ, ಫರ್ಹತ್ ರವರನ್ನು ಹಿಂದಿಕ್ಕಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ದ್ವಿತೀಯ ವಿಜ್ಞಾನ ವಿಭಾಗದ ಅಫ್ರಾ ಕೆ.ಎ ಕುಶಾಲನಗರ ಅವರು ಚುನಾಯಿತರಾದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಜುಬೈರಿಯಾ ಶಮ್ನ, ಫಾತಿಮತ್ ಸಜ್ನ ರವರನ್ನು ಸೋಲಿಸಿ ದ್ವಿತೀಯ ವಿಜ್ಞಾನ ವಿಭಾಗದ ಇಫ್ಝ ಹಲೀಮಾ ಕೃಷ್ಣಾಪುರ ಆಯ್ಕೆಗೊಂಡರು.
ಜತೆ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ ಅಶೀಮಾ ಇಶ್ರತ್ ಹಾಗೂ ನಿತಾ ಫಾತಿಮ ವಿರುದ್ದ ದ್ವಿತೀಯ ವಿಜ್ಞಾನ ವಿಭಾಗದ ಮಿಸ್ಬಾ ನಾವುಂದ ವಿಜೇತರಾದರು.
ಚುನಾವಣೆಯು ಪಾರದರ್ಶಕ ಮತ್ತು ಶಿಸ್ತುಬದ್ದವಾಗಿ ನಡೆಯಿತು.
ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂದ್ಯಾ ಪಿ, ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಉಪನ್ಯಾಸಕ ವೃಂದದವರು ವಿವಿಧ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಹಕರಿಸಿದರು.