ಪಾಪೆಮಜಲು ಅಂಗನವಾಡಿಗೆ ಇನ್ವರ್ಟರ್ ಕೊಡುಗೆ

ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಅಂಗನವಾಡಿ ಕೇಂದ್ರಕ್ಕೆ ಬಾಲವಿಕಾಸ ಸಮಿತಿಯವರ ಕೋರಿಕೆಯ ಮೇರೆಗೆ, ಇನ್ನರ್ ವೀಲ್ ಪುತ್ತೂರು ಇದರ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಮತ್ತು ಪದಾಧಿಕಾರಿಗಳು, ಅಂಗನವಾಡಿ ಮಕ್ಕಳ ಗಾಳಿ ಮತ್ತು ಬೆಳಕಿನ ಉಪಯೋಗಕ್ಕಾಗಿ ಅಂದಾಜು ರೂ. 25,000 ವೆಚ್ಚದ ಇನ್ವರ್ ಟರ್ ಮತ್ತು ಬ್ಯಾಟರಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರ ಕೊಡುಗೆಗೆ ಬಾಲವಿಕಾಸ ಸಮಿತಿ ಅಧ್ಯಕ್ಷೆ ಜ್ಯೋತಿ, ಮತ್ತು ಪದಾಧಿಕಾರಿಗಳು, ಶಿಕ್ಷಕಿ ವಿಮಲ, ಸಹಾಯಕಿ ಮಮತಾ, ಹಾಗೂ ಮಕ್ಕಳ ಪೊಷಕರು ಉಪಸ್ಥಿತರಿದ್ದರು.