ಮೈದಾನದಲ್ಲಿ ಕುಸಿದು ಬಿದ್ದ ಅಫ್ಘಾನ್ ಆಟಗಾರ ಗುಲ್ಬದಿನ್
ಜೂ.25ರಂದು ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಸೂಪರ್ 8 ಪಂದ್ಯದ ಮಹತ್ವದ ಪಂದ್ಯದಲ್ಲಿ ಅಫ್ಘಾನ್ ತಂಡದ ವಿರುದ್ಧ ಬಾಂಗ್ಲಾ ತಂಡ ರನ್ ಚೇಸ್ ಮಾಡುವ ಸಂದರ್ಭದಲ್ಲಿ ಮಳೆ ಬಂದು ಪಂದ್ಯ ನಿಂತ ಕಾರಣ ಕೊನೆಯದಾಗಿ ಡಿಎಲ್‌ಎಸ್ ನಿಯಮದ ಪ್ರಕಾರ ಒಂದು ಓವರ್ ಕಡಿತಗೊಳಿಸಿ 114 ರನ್ ಗುರಿ ನೀಡಲಾಯಿತು.

ಡಿಎಲ್‌ಎಸ್ ಪ್ರಕಾರ ಬಾಂಗ್ಲಾ ಎರಡು ರನ್ ಹಿನ್ನಡೆಯಲ್ಲಿತ್ತು. ಆ ವೇಳೆ ಪಂದ್ಯ ರದ್ದುಗೊಂಡರೆ ಅಫ್ಘಾನ್ ಸೆಮಿಫೈನಲ್ ಪ್ರವೇಶ ಪಡೆಯುತ್ತಿತ್ತು. ಆ ವೇಳೆ ಅಫ್ಘಾನ್ ಕೋಚ್ ಜೊನಾಥನ್ ಟ್ರಾಟ್ ಅವರು ‘ ಮಳೆ ಬರುತ್ತಿದೆ ಎಂದು ಕೈಬೀಸುತ್ತಾ ತಂಡದ ಆಟಗಾರರಿಗೆ ಸಿಗ್ನಲ್ ಕೊಡುತ್ತಿದ್ದರು. ಇದೇ ವೇಳೆ ತಂಡದ ಆಟಗಾರ ಗುಲ್ಬದಿನ್ ನಯೀಬ್ ಸ್ಲಿಪ್‌ನಲ್ಲಿ ನಿಂತಿದ್ದರು. ಇನ್ನೇನು ಬೌಲರ್ ಬೌಲಿಂಗ್ ಮಾಡಲು ರೆಡಿಯಾಗುತ್ತಿದ್ದಂತೆ ಗುಲ್ಬದಿನ್ ಇದ್ದಕ್ಕಿದ್ದಂತೆ ಮೈದಾನದಲ್ಲಿ ಬಿದ್ದಿದ್ದಾರೆ. ನಂತರ ಅವರನ್ನು ಸಹ ಆಟಗಾರರ ನೆರವಿನಿಂದ ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ಯಲಾಯಿತು.
ಅ 11.4 ಓವರ್ ಗಳಲ್ಲಿ 81 ರನ್ ಗೆ 2 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಪಂದ್ಯ ಮಳೆಯಿಂದ ಮತ್ತೆ ನಿಂತು ಆರಂಭಗೊಂಡಾಗ ಗುಲ್ಬದಿನ್ ಫೀಲ್ಡ್‌ಗೆ ಬಂದಿಲಿಲ್ಲ. 15ನೇ ಓವರ್ ಗಾಗಿ ಗುಲ್ಬದಿನ್ ಮೈದಾನಕ್ಕೆ ಬಂದಿದ್ದರು.
ಗುಲ್ಬದಿನ್ ಫೀಲ್ಡ್ ಮಾಡುವಾಗ, ಕೋಚ್ ಸಿಗ್ನಲ್ ಕೊಟ್ಟ ಬಳಿಕವೇ ಗುಲ್ಬದಿನ್ ಮಂಡಿನೋವಿನಿಂದ ಕುಸಿದು ಬಿದ್ದಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು ನಾನಾ ರೀತಿಯಲ್ಲಿ ವ್ಯಂಗ್ಯವಾಡಿದ್ದಾರೆ. ಬಾಂಗ್ಲಾ ಬ್ಯಾಟ್ಸ್‌ಮೆನ್ ಲಿಟನ್ ದಾಸ್ ಗುಲ್ಬದಿನ್ ಬಿದ್ದ ದೃಶ್ಯವನ್ನು ಇತರ ಆಟಗಾರರ ಜೊತೆ ವ್ಯಂಗ್ಯ ರೀತಿಯಲ್ಲಿ ಮಾತನಾಡಿದ್ದುದೂ ಕಂಡು ಬಂತು. ವೀಕ್ಷಕ ವಿವರಣೆ ನೀಡುತ್ತಿದ್ದವರು ಕೂಡಾ ಗುಲ್ಬದಿನ್ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ.
ಗುಲ್ಬದಿನ ನಾಟಕಕ್ಕೆ ಆಸ್ಕರ್ ಅವಾರ್ಡ್ ಕೊಡಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಪಂದ್ಯ ಗೆದ್ದ ಕೂಡಲೇ ಗುಲ್ಬದಿನ್ ಓಡಿಕೊಂಡು ಬಂದು ಸಂಭ್ರಮಟ್ಟಿದ್ದಾರೆ. ಗಾಯಗೊಂಡು ವಿಶ್ರಾಂತಿಯಲ್ಲಿದ್ದ ಗುಲ್ಬದಿನ್ ಅಷ್ಟು ಬೇಗ ಓಡಿ ಬರಲು ಹೇಗೆ ಸಾಧ್ಯ? ಇದೊಂದು ನಾಟಕ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗುಲ್ಬದಿನ್ ವಿಡೀಯೋ ವೈರಲ್ ಆಗಿದೆ.