ಬಕ್ರೀದ್: ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ- ಯೋಗಿ
ಜೂ.17ರಂದು ಆಚರಿಸುವ ಬಕ್ರೀದ್ ಹಬ್ಬಕ್ಕೆ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿಯನ್ನು ನೀಡಿದೆ. ಬಕ್ರೀದ್ ಸಂಪ್ರಾದಾಯದಂತೆ ಆಚರಣೆ ಮಾಡಲಿ, ಆದರೆ ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದು ಅಥವಾ ಮಾರ್ಗ ಮಧ್ಯೆ ಪ್ರಾಣಿಗಳ ಬಲಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸರ್ಕಾರ ಹಾಗೂ ಸ್ಥಳೀಯ ಆಡಳಿತ ನಿಗದಿಪಡಿಸಿರುವ ಸ್ಥಳದಲ್ಲೇ ನಮಾಜ್ ಮಾಡಬೇಕು ಹಾಗೂ ಪ್ರಾಣಿ ಬಲಿ ನೀಡಬೇಕು. ಪ್ರಾಣಿ ಬಲಿ ನೀಡುವ ಮುನ್ನ ಸ್ಥಳೀಯ ಅಧಿಕಾರಿಗಳ ಒಪ್ಪಿಗೆ ಪಡೆಯಬೇಕು ಎಂದು ಹೇಳಿದ್ದಾರೆ. ವಿವಾದಿತ/ ಸೂಕ್ಷ್ಮ ಪ್ರದೇಶದಲ್ಲಿ ಪ್ರಾಣಿ ಬಲಿ ನೀಡಬಾರದು. ನಿಷೇಧಿತ ಪ್ರದೇಶದಲ್ಲಿ ಪ್ರಾಣಿ ಬಲಿಯಾಗದಂತೆ ನೋಡಿಕೊಳ್ಳಬೇಕು. ಪ್ರಾಣಿ ಬಲಿಯಾದ ನಂತರ ಪ್ರತಿ ಜಿಲ್ಲೆಯಲ್ಲೂ ತ್ಯಾಜ್ಯ ವಿಲೇವಾರಿಯಾಗಬೇಕು ಎಂದು ಅವರು ಹೇಳಿದ್ದಾರೆ.