ಬೋಳಿಯಾರ್ ಘಟನೆ: ಹೊರಗಿನವರು ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ:ಯುಟಿ ಖಾದರ್
ಬೋಳಿಯಾರ್ ನಡೆದ ಘಟನೆ ಬಗ್ಗೆ ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಮಾತನಾಡಿದ್ದು ಸ್ಥಳೀಯರೆ ಮುಂದೆ ನಿಂತು ಅಲ್ಲಿ ಸೌಹಾರ್ದ ನೆಲೆಸುವಂತೆ ಮಾಡಿದ್ದಾರೆ. ಹೊರಗಿನವರು ಅಲ್ಲಿಗೆ ಹೋಗಿ ಶಾಂತಿ ಕೆಡಿಸುವ ಕೆಲಸ ಮಾಡುವುದು ಬೇಡ. ಮಂಗಳೂರು ಕ್ಷೇತ್ರದಲ್ಲಿ ಸರ್ವಧರ್ಮದ ಜನರು ಸೌಹಾರ್ದದಿಂದ ವಾಸವಾಗಿದ್ದಾರೆ. ಕೆಲವು ಯುವಕರಿಂದಾಗಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಕ್ಷೇತ್ರದ ಶೇ.99ರಷ್ಟು ಒಳ್ಳೆಯವರನ್ನು ನೋಡುವ ಜವಾಬ್ದಾರಿ ನನ್ನದು. ಉಳಿದ ಶೇ.1ರಷ್ಟು ಸಮಸ್ಯೆ ಸೃಷ್ಟಿಸುವವರನ್ನು ಪೊಲೀಸರು ನೋಡಿಕೊಳ್ಳುತ್ತಾರೆ.
ಅಲ್ಲಿ ವಾಸ್ತವದಲ್ಲಿ ಏನಾಗಿದೆ ಎಂಬುದು ಸ್ಥಳದಲ್ಲಿ ಇದ್ದವರಿಗೆ, ಸ್ಥಳೀಯರಿಗೆ ಮಾತ್ರ ಗೊತ್ತಿದೆ. ಮೂರನೇ ವ್ಯಕ್ತಿಗಳಾಗಿ ನಾವು ನಿರ್ಣಯಕ್ಕೆ ಬರುವುದು ಸರಿಯಲ್ಲ. ಈ ರೀತಿ ಮಾಡಿದರೆ ಚುನಾವಣೆಯಲ್ಲಿ ಮತ ಸಿಗುತ್ತದೆ ಎಂಬ ಭ್ರಮೆ ಬೇಡ. ಈ ರೀತಿ ಮಾಡುವುದರಿಂದ ಒಂದು ವೋಟ್ ಕೂಡ ಸಿಗುವುದಿಲ್ಲ. ನಾನು ಒಳ್ಳೆಯವರಿಗೆ ಕಾಣುತ್ತೇನೆ. ಸಮಾಜ ವಿರೋಧಿಗಳಿಗೆ ಕಾಣುವುದಿಲ್ಲ ಎಂದು ಖಾದರ್ ಹೇಳಿದರು.