ಅಂತಾರಾಷ್ಟ್ರೀಯಕ್ರೀಡೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-8 ಹಂತ ಪ್ರವೇಶಿಸಿದ ಭಾರತ



ನ್ಯೂಯಾರ್ಕ್‌: ಅಮೆರಿಕ (ಯುಎಸ್ಎ) ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ ಟಿ20 ವಿಶ್ವಕಪ್‌ ಕ್ರಿಕೆಟ್‌ನ ಸೂಪರ್‌-8 ಹಂತ ಪ್ರವೇಶಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಅಮೆರಿಕ 8 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿತು. ಭಾರತ ಪರ ಅರ್ಷದಿಪ್ ಸಿಂಗ್ 4 ವಿಕೆಟ್ ಪಡೆದು ಮಿಂಚಿದರು. ಸುಲಭದ ಗುರಿ  ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ ಅವರ ಆಟದ ನೆರವಿನಿಂದ 18.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಜಯ ಸಾಧಿಸಿತು.

ಎ ಗುಂಪಿನಿಂದ ಸೂಪರ್-8‌ ಪ್ರವೇಶಿಸಿದ ಮೊದಲ ತಂಡ ಭಾರತವಾಗಿದೆ. ಭಾರತ ಬ್ಯಾಟಿಂಗ್ ವೇಳೆ ರನ್ ಮೆಶಿನ್ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದರು. ರೋಹಿತ್‌ ಶರ್ಮಾ 3 ರನ್‌ಗೆ ಔಟಾದರು. ರಿಷಭ್‌ ಪಂತ್‌ 18 ರನ್‌(20 ಎಸೆತ, 1 ಬೌಂಡರಿ, 1 ಸಿಕ್ಸರ್‌), ಸೂರ್ಯಕುಮಾರ್‌ ಯಾದವ್‌ ಔಟಾಗದೇ 50 ರನ್‌ (49 ಎಸೆತ, 2 ಬೌಂಡರಿ, 2 ಸಿಕ್ಸರ್)‌ ಶಿವಂ ದುಬೆ ಔಟಾಗದೇ 31 ರನ್‌ (35 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದರು. ಮುರಿಯದ 4ನೇ ವಿಕೆಟಿಗೆ ಸೂರ್ಯಕುಮಾರ್‌ ಯಾದವ್‌ ಮತ್ತು ಶಿವಂ ದುಬೆ 65 ಎಸೆತಗಳಲ್ಲಿ 67 ರನ್‌ ಜೊತೆಯಾಟವಾಡುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!