ಇವರು ದೇಶದ ಅತೀ ಕಿರಿಯ ಸಂಸದೆ
ಸಮಸ್ತಿಪುರದ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಅಭ್ಯರ್ಥಿ, ಇಪ್ಪತ್ತೈದು ವರ್ಷದ ಶಾಂಭವಿ ಚೌಧರಿ ಅವರು ಲೋಕಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ದೇಶದ ಅತ್ಯಂತ ಕಿರಿಯ ದಲಿತ ಮಹಿಳಾ ಸಂಸದೆಯಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
25 ವರ್ಷದ ಶಾಂಭವಿ ಅವರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಜೆಡಿಯು ಸಚಿವ ಮಹೇಶ್ವರ್ ಹಜಾರಿಯವರ ಪುತ್ರ ಸನ್ನಿ ಹಜಾರಿ ಅವರನ್ನು 1.87 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.