ಕರಾವಳಿ

ಡಿ.5: ಸುಳ್ಯ ಅನ್ಸಾರಿಯಾ ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ

ಸುಳ್ಯದಲ್ಲಿರುವ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರವಾಗಿರುವ ಅನ್ಸಾರಿಯಾ ಎಜುಕೇಶನ್ ಸೆಂಟರ್‌ನ ನಲ್ಲಿ ಮಹಿಳಾ ಶರೀಅತ್ ಕಾಲೇಜು ಇದರ ಪ್ರಥಮ ಸನದುದಾನ ಸಮಾರಂಭ ನ.5ರಂದು ನಡೆಯಲಿದೆ ಎಂದು ಅನ್ಸಾರಿಯಾ ಎಜುಕೇಶನ್ ಸೆಂಟರ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.


ಡಿ.3ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್‌ನ ನಿರ್ದೇಶಕ ಉಮ್ಮರ್ ಕೆ.ಎಸ್. ರವರು ಮಾಹಿತಿ ನೀಡಿದರು. ಅನ್ಸಾರಿಯಾ ಸಂಸ್ಥೆ 1996ರಲ್ಲಿ ಆರಂಭಗೊಂಡು 21ನೇ ವಾರ್ಷಿಕ ಸ್ವಲಾತ್ ಬುರ್ದಾ ಮಜ್ಲಿಸ್ ನಡೆಯುತ್ತಿದೆ. ಡಿ.2ರಿಂದ ಕಾರ್ಯಕ್ರಮ ಆರಂಭಗೊಂಡಿದ್ದು, ಡಿ.5ರಂದು ಮಹಿಳಾ ಶರೀಅತ್ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


ಬಡ ಮತ್ತು ನಿರ್ಗತಿಕ ಮಕ್ಕಳ ಸಮನ್ವಯ ವಿದ್ಯಾಭ್ಯಾಸ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದಿಂದ ಆರಂಭಗೊಂಡ ಸಂಸ್ಥೆಯಲ್ಲಿ ಮಕ್ಕಳಿಗೆ ಧಾರ್ಮಿಕ – ಲೌಕಿಕ ಸಮನ್ವಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಪ್ರಸ್ತುತ ಸಂಸ್ಥೆಯು ದಅವಾ ಕಾಲೇಜು, ಸ್ಕೂಲ್ ಆಫ್ ಹಿಫ್‌ಳುಲ್, ಖುರ್ ಆನ್, ಅರಬಿಕ್ ಮದ್ರಸ, ಜುಮಾ ಮಸೀದಿ, ಮಹಿಳಾ ಶರೀಅತ್ ಕಾಲೇಜು, ಸ್ಕೂಲ್ ಆಫ್ ದವಾ, ಗ್ರೀನ್ ವ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್, ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್, ಕನ್ವೆನ್ಷನಲ್ ಹಾಲ್ ಮುಂತಾದ ಉಪ ಸಂಸ್ಥೆಗಳಾಗಿ ಕಾರ್ಯಾಚರಿಸುತ್ತಿದೆ. ಸಂಸ್ಥೆಯಲ್ಲಿ 100 ರಷ್ಟು ವಿದ್ಯಾರ್ಥಿಗಳು ಸುಸಜ್ಜಿತ ಹಾಸ್ಟೆಲ್ ಸೌಲಭ್ಯದ ಜತೆಗೆ 350 ರಷ್ಟು ವಿದ್ಯಾರ್ಥಿಗಳು ಸಂಸ್ಥೆಯ ಅಧೀನದಲ್ಲಿ ಕಲಿಯುತ್ತಿದ್ದಾರೆ ಎಂದು ಅವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಪ್ರಮುಖರಾದ ಲತೀಫ್ ಹರ್ಲಡ್ಕ, ಅಬ್ದುಲ್ ಖಾದರ್ ಪಟೇಲ್, ಶರೀಫ್ ಕಂಠಿ, ಮಹಮ್ಮದ್ ಉವೈಸ್ ಇದ್ದರು.

Leave a Reply

Your email address will not be published. Required fields are marked *

error: Content is protected !!