ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಸುನಿಲ್ ಛೆಟ್ರಿ ವಿದಾಯ
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6 ರಂದು ನಡೆಯಲಿರುವ ಕುವೈತ್ ವಿರುದ್ಧದ ಪಂದ್ಯದ ಮೂಲಕ ವಿದಾಯ ಹೇಳುತ್ತಿರುವುದಾಗಿ ಛೆಟ್ರಿ ತಿಳಿಸಿದ್ದಾರೆ.

ನಿವೃತ್ತಿ ಘೋಷಿಸಿರುವ ಸುನಿಲ್ ಛೆಟ್ರಿ ಜೂನ್ 6 ರಂದು ಕೊನೆಯ ಬಾರಿಗೆ ಭಾರತದ ಪರ ಕಣಕ್ಕಿಳಿಯಲಿದ್ದಾರೆ. ಕುವೈತ್ ವಿರುದ್ಧದ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ 39 ವರ್ಷದ ಸುನಿಲ್ ಛೆಟ್ರಿ ವಿದಾಯ ಹೇಳಲಿದ್ದಾರೆ.
ಸುನಿಲ್ ಛೆಟ್ರಿಯ ನಿವೃತ್ತಿ ಘೋಷಣೆಯ ವಿಡಿಯೋಗೆ, ಮೈ ಬದ್ರರ್, ನಿನ್ನ ಬಗ್ಗೆ ಹೆಮ್ಮೆಯಿದೆ ಎಂದು ವಿರಾಟ್ ಕೊಹ್ಲಿ ಹಾರ್ಟ್ ಎಮೋಜಿ ಹೊಂದಿರುವ ಕಾಮೆಂಟ್ ಹಾಕಿದ್ದಾರೆ. ಕೊಹ್ಲಿಯ ಕಾಮೆಂಟ್ ಇದೀಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಹಾಗೂ ಸುನಿಲ್ ಛೆಟ್ರಿ ಉತ್ತಮ ಸ್ನೇಹಿತರು. ಈ ಹಿಂದೆ ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು.