ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಫೀಲ್ಡ್ ಗಿಳಿದ ಕೆ.ಎಸ್ ಉಮ್ಮರ್
ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಸೇರ್ಪಡೆ ಆದ ಕೂಡಲೇ ಕಾಂಗ್ರೆಸ್ ಪಕ್ಷಕ್ಕಾಗಿ ಫೀಲ್ಡ್ ಗೆ ಇಳಿದಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಖಾಂತರ ತನ್ನ ರಾಜಕೀಯ ಜೀವನವನ್ನು ಆರಂಭಿಸಿ, ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ ನಂತರ ಕೆಲವೊಂದು ಕಾರಣದಿಂದ ಪಕ್ಷದಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಗರ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಜನಪರವಾಗಿ ಕೆಲಸಮಾಡುತ್ತಿದ್ದ ಇವರು ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅನೇಕ ಜನಪರ ವಿಚಾರದಲ್ಲಿ ಮುಂದೆ ನಿಂತು ಹಲವು ಭಾರಿ ತನ್ನದೇ ಶೈಲಿಯಲ್ಲಿ ಪ್ರತಿಭಟಿಸಿ ಸಮಸ್ಯೆಗಳಿಗೆ ಪರಿಹಾರ ಪಡೆಯುವಲ್ಲಿ ಉಮ್ಮರ್ ಕೆ ಎಸ್ ಯಶಸ್ವಿಯಾಗಿದ್ದರು. ಅದರ ಹೊರತಾಗಿ ಸಮುದಾಯದ ಪರವಾಗಿಯು ಧ್ವನಿಯೆತ್ತಿ ಸಮುದಾಯಕ್ಕೆ ಧೈರ್ಯ ತುಂಬ ಕೆಲಸ ಮಾಡುತ್ತಿದ್ದರು. ಜನಪರವಾದ ಯಾವುದೇ ಹೋರಾಟ ಇದ್ದರೂ ಅಲ್ಲಿ ಕೆ ಎಸ್ ಉಮ್ಮರ್ ಇದ್ದೇ ಇರುತ್ತಾರೆ. ಹೋರಾಟವೇ ಅವರ ಜೀವನದ ಭಾಗ ಎನ್ನುವ ಮಾತು ಸುಳ್ಯದಲ್ಲಿ ಚಾಲ್ತಿಯಲ್ಲಿದೆ. ಬಡವರ, ನೊಂದವರ, ಅನ್ಯಾಯಕ್ಕೆ ಒಳಗಾದವರ ಪರ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಕೆ ಎಸ್ ಉಮ್ಮರ್ ಅವರು ಸಮಾಜದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಕಾನೂನಾತ್ಮಕ, ಸಂವಿಧಾನ ಬದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ಉಮ್ಮರ್ ಕೆ ಎಸ್ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ರಾಜಕೀಯದ ತನ್ನ ದ್ವಿತೀಯ ಇನಿಂಗ್ಸ್ ಕಾಂಗ್ರೆಸ್ ಪಕ್ಷದಿಂದ ಆರಂಭಿಸಿದ್ದು ಅವರಿಗೆ ಯಶಸ್ಸು ಸಿಗಲಿ ಎಂದು ಅವರ ಹಿತೈಷಿಗಳು ಹಾರೈಸಿದ್ದಾರೆ.