ಕರಾವಳಿ

ಅಲ್ಲಿ ಗೆದ್ದದ್ದು ಮಾನವೀಯತೆ..!

ಆತ ಅವರ ಯಾರೂ ಅಲ್ಲ.ಅಣ್ಣನಲ್ಲ,ತಮ್ಮನಲ್ಲ,ಮಿತ್ರನಲ್ಲ,ಬಂಧು ಅಲ್ಲ,ಜಾತಿಯವನಲ್ಲ,ಧರ್ಮೀಯನೂ ಅಲ್ಲ.

ಆದರೆ,ಆತನನ್ನು ಅವರು ಪರಿಗಣಿಸಿದ್ದು ಅವನು ನಮ್ಮಂತೆ ಒಬ್ಬ ಮನುಷ್ಯನು.ಒಬ್ಬ ಹೆತ್ತಕರುಳಿನ ಕುಡಿ,ಒಬ್ಬ ಒಡಹುಟ್ಟಿದ ಸಹೋದರ.

ಅಬ್ದುಲ್ ರಹೀಂ

ಅಚಾನಕ್ಕಾಗಿ ಸಂಭವಿಸಿದ ಘಟನೆಯೊಂದರಿಂದ ತನ್ನ ಅಮೂಲ್ಯ 18 ವರ್ಷಗಳನ್ನು ಸೌದಿ ಅರೇಬಿಯಾದ ಸೆರೆಮನೆಯಲ್ಲಿ ಕಳೆದು,ಮರಣದಂಡನೆ ವಿಧಿಸಲ್ಪಟ್ಟ ಅಬ್ದುಲ್ ರಹೀಂ ಎಂಬ ಯುವಕ ರಕ್ಷಣೆಯ ದಾರಿ ಕಾಣದೆ ಕಣ್ಣೀರಲ್ಲಿ ದಿನಾ ಮುಳುಗೆದ್ದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಆ ತಾಯಿಯ ದುವಾಗಳಿಗೆ ಕೊನೆಗೂ ಉತ್ತರ ಲಭಿಸಿದ್ದ ಆ ಅವರ್ಣನೀಯ ಕ್ಷಣ.

ಅಲ್ಲಿ ಯಾವ ಧರ್ಮ ದಂಗಲ್ ನಡೆಯಲಿಲ್ಲ.ಅವನ ಧರ್ಮವನ್ನು ಯಾರೂ ಪರಿಗಣಿಸಲಿಲ್ಲ.ವಧೆ ಶಿಕ್ಷೆಯಿಂದ ಮುಕ್ತಿಗೊಳಿಸಲು ಬೇಕಾದ 34 ಕೋಟಿಯ ಬೃಹತ್ ಮೊತ್ತ ಬೆರಳೆಣಿಕೆ ದಿನಗಳಲ್ಲಿ ಸಂಗ್ರಹವಾಯಿತು.

ಅದಕ್ಕಾಗಿ ,ಇಡೀ ಕೇರಳ ರಾಜ್ಯ ಒಂದಾಯಿತು.ಮಾತ್ರವಲ್ಲ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಹಿಂದೂ,ಮುಸ್ಲಿಂ, ಕ್ರೈಸ್ತ… ಇತರ ಧರ್ಮೀಯರು.ಧನಿಕರು- ಬಡವರು,ಹಿರಿಯರು-ಕಿರಿಯರು …….ಅನಿವಾಸಿ ಭಾರತೀಯರು ನಮ್ಮ ಮನೆಯ ಸದಸ್ಯನೊಬ್ಬನನ್ನು ರಕ್ಷಿಸಲು ಪಣತೊಟ್ಟಂತೆ ಬೀದಿ,ಬೀದಿ ಸುತ್ತಿದರು,ಕೈಚಾಚಿದರು.1 ರುಪಾಯಿಯಿಂದ 1ಕೋಟಿಯವರೆಗೆ ನೀಡಿದರು.

ಕೋಟ್ಯಾಧಿಪತಿ “ಬೋಚೆ ಚೆಮ್ಮನೂರು”ರಂತವರು ತಾನು ಕೋಟಿ ಕೊಟ್ಟು ಇತರರಿಂದಲೂ ಸಂಗ್ರಹಿಸಲು ಹೊರಟ ದೃಶ್ಯ,ಅವರ ಹೃದಯವಂತಿಕೆ ಮನಕಲಕಿತು.ಜತೆಯಲ್ಲಿ ಕೇರಳ ,ಕರ್ನಾಟಕದ, ಅನಿವಾಸಿಗಳ ಸ್ಪಂಧನೆ ವರ್ಣನೆಗೆ ಮೀರಿದ್ದವು.

ಅಲ್ಲಿ ಮಾನವೀಯತೆ ಗೆದ್ದಿತು.ಭಾರತದ ನೈಜ ಸಂಸ್ಕೃತಿ ಗೆದ್ದಿತು.ವರ್ಣಿಸಲು ಪದಗಳಿಲ್ಲ.ಲೇಖನಿಯೂ ಸೋತಿತು.

ದೇವರು ಅವರೆಲ್ಲರಿಗೂ ತಕ್ಕುದಾದ ಪ್ರತಿಫಲ ನೀಡಲಿ.ಆ ರಹೀಂ ಎಂಬ ಕೇರಳೀಯ ಸಹೋದರ ಶೀಘ್ರ ವಿಮೋಚನೆಗೊಂಡು ಕುಟುಂಬವನ್ನು ಸೇರುವಂತಾಗಲಿ.

“ಮಾನವೀಯತೆಗಿಂತ ಮಿಗಿಲಾದ ಧರ್ಮ ಯಾವುದಿದೆ…?”

ಇದಲ್ಲವೇ “Real Indian Story”

“ಮೇರಾ ಭಾರತ್ ಮಹಾನ್”
_____
✍️ಹೈದರ್ ಆಲಿ ಐವತ್ತೊಕ್ಲು

Leave a Reply

Your email address will not be published. Required fields are marked *

error: Content is protected !!