ಮಂಗಳೂರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಭರ್ಜರಿ ರೋಡ್ ಶೋ
ಮಂಗಳೂರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ
ಭರ್ಜರಿ ರೋಡ್ ಶೋ ಮಾಡಿದ್ದು, ಸಾವಿರಾರು ಜನ ಭಾಗಿಯಾಗಿದ್ದಾರೆ. ರೋಡ್ ಶೋ ವೀಕ್ಷಿಸಲು ಆಗಮಿಸಿದವರು ಮೋದಿ ಹಾಗೂ ಬಿಜೆಪಿಗೆ ಜೈಕಾರ ಹಾಕುತ್ತಿದ್ದರು.

ಜನರು ಕಟ್ಟಡಗಳ ಮೇಲೇರಿ ನಿಂತು ಮೋದಿ ರೋಡ್ ಶೋ ವೀಕ್ಷಿಸಿದ್ದಾರೆ. ನಗರದೆಲ್ಲೆಡೆ ಮೋದಿ, ಮೋದಿ ಜೈ ಘೋಷ ಮೊಳಗಿತ್ತು. ಸಾವಿರಾರು ಮಂದಿ ಮೋದಿ ಅಭಿಮಾನಿಗಳು ಸೇರಿದ್ದು, ಅಭಿಮಾನಿಗಳ ಪ್ರೀತಿ, ಕರತಾಡನ ಕಂಡು ಪುಳಕಿತರಾದರು. ಕಾರ್ಯಕರ್ತರತ್ತ ಹೂ ಎಸೆದು ಖುಷಿ ವ್ಯಕ್ತಪಡಿಸಿದ್ದಾರೆ. ಕಮಲದ ಚಿಹ್ನೆ ತೋರಿಸಿ ಕಾರ್ಯಕರ್ತರಿಗೆ ಮೋದಿ ಹುರುಪು ತುಂಬಿದರು. ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.