ಕರಾವಳಿರಾಜಕೀಯರಾಷ್ಟ್ರೀಯ

ರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನ ಅನರ್ಹತೆ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ: ಸತ್ಯಕ್ಕೆ ಸಂದ ಜಯ : ಎಂ ವೆಂಕಪ್ಪ ಗೌಡರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹ ಮಾಡಿದ ಮತ್ತು ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದು ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪಗೌಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಇದೊಂದು ಅಪರೂಪದ ಬೆಳವಣಿಗೆಯಾಗಿದ್ದು ದೇಶದಲ್ಲಿ ಹಿಂದೆಂದೂ ಇಂತಹ ಪ್ರಕರಣ ಸಂಭವಿಸಿರಲಿಲ್ಲ. ಕೇವಲ ವಿರೋಧ ಪಕ್ಷವನ್ನು ತುಳಿಯಲು, ನಾಯಕರುಗಳನ್ನು ಅವಮಾನಿಸುವಂತ ಸಣ್ಣತನವನ್ನು ತೋರಿದ ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷಕ್ಕೆ ಇದು ಒಂದು ಪಾಠ ವಾಗಬೇಕು. ರಾಹುಲ್ ಗಾಂಧೀಯವರು ದೇಶದ ಸಮಸ್ಯೆಗಳನ್ನು ಮತ್ತು ಕೇಂದ್ರ ಸರಕಾರದ ವೈಫಲ್ಯಗಳನ್ನು ಸಂಸತ್ತಿನಲ್ಲಿ ಮಾತನಾಡುತ್ತಾರೆ ಎಂದು ಸಂಸತ್ ಸ್ಥಾನದಿಂದ ಅನರ್ಹಗೊಳಿಸುವ ಮತ್ತು ಸುಳ್ಳಿನ ಮುಖಾಂತರ ಸತ್ಯದ ಮೇಲೆ ಸವಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರಸರಕಾರ ಹೊರಟಿದೆ.

ರಾಹುಲ್ ಗಾಂಧಿಯವರ ಮೇಲಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುವುದಾಗಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!