ಕರಾವಳಿರಾಜ್ಯರಾಷ್ಟ್ರೀಯ

ಭವಿಷ್ಯದ ಪೀಳಿಗೆಯ ಬದುಕಿಗೆ ಮೌಲ್ಯಾಧಾರಿತ ಸಮಾಜದ ಸಂಕಲ್ಪದೊಂದಿಗೆ ಈದ್ ಹಬ್ಬವನ್ನು ಆಚರಿಸೋಣ: ಅಮ್ಜದ್ ಖಾನ್ ಪೊಳ್ಯ





ನಮ್ಮ ಹಿರಿಯರು ಬಹಳ ತಖ್ವಾ ಮತ್ತು ಭಕ್ತಿಯಿಂದ ಬದುಕಿದರು. ಕುಟುಂಬ ಜೀವನ, ಸಾಮಾಜಿಕ ಜೀವನ ಮತ್ತು ಮೌಲ್ಯಯುಕ್ತ ಜೀವನದಲ್ಲಿ ಅವರು ನಮಗೆ ಮಾದರಿಯಾಗಿದ್ದರು. ಬಡತನ ಮತ್ತು ಸಮಸ್ಯೆಗಳಿದ್ದರೂ ಅವರಲ್ಲಿ ಭರವಸೆಗಳಿತ್ತು, ದೇವನ ಮೇಲಿನ ಭಯವಿತ್ತು. ಪ್ರಸ್ತುತ ನಾವು ಬೌತಿಕ ಆಯ್ಕೆ ಮತ್ತು ಆಸಕ್ತಿಗಳ ಬೆನ್ನುಹತ್ತಿ ಮೌಲ್ಯ ಮತ್ತು ಸಂಬಂಧಗಳಿಂದ ದೂರ ಸರಿದಿದ್ದೇವೆ. ಸಾಮಾಜಿಕ ಜವಾಬ್ದಾರಿಯು ನಮ್ಮಲ್ಲಿ ಕಡಿಮೆಯಾಗುತ್ತಿದೆ ಎಂದು ಅನಿಸುತ್ತಿದೆ. ನಮ್ಮ ಜಾಗರೂಕತೆ ಇಲ್ಲದ ಬದುಕು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಬಾರದು. ಈ ನಿಟ್ಟಿನಲ್ಲಿ ನಾವೆಲ್ಲರೂ ಭವಿಷ್ಯದ ಪೀಳಿಗೆ ಬದುಕಿಗೆ ಸಮೃದ್ದ ಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡುವ ಮೂಲಕ ಈದುಲ್ ಪಿತ್ರ್ ಹಬ್ಬವನ್ನು ಆಚರಿಸುವ ಎಂದು ಕಮ್ಯೂನಿಟಿ ಸೆಂಟರ್ ನ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ ಈದ್ ಸಂದೇಶ ನೀಡಿದ್ದಾರೆ.

ಶಿಕ್ಷಣ, ಮೌಲ್ಯದಾರಿತ ಜೀವನ , ಸಾಮಾಜಿಕ ಕಾಳಜಿಯ ಅಭಿಯಾನಗಳು ಹೆಚ್ಚಬೇಕು. ಆ ಉದ್ದೇಶವನ್ನು ಯಶಸ್ವಿಗೊಳಿಸಲು ಯುವ ತಲೆಮಾರಿಗೆ ನಾಡಿನ ವಿದ್ವಾಂಸರು, ಚಿಂತಕರು, ಹೆತ್ತವರು ಶ್ರಮಿಸಬೇಕು. ಪ್ರತೀಯೊಬ್ಬ ಹೆತ್ತವರೂ ತಮ್ಮ ಮಕ್ಕಳ ಬದುಕಿಗೆ ಅತ್ಯುತ್ತಮ ಮಾದರಿಯಾಗಬೇಕು. ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಜವಾಬ್ದಾರಿಗಳಲ್ಲಿ ಅವರನ್ನು ಉತ್ತೇಜಿಸುವ ಅತ್ಯುತ್ತಮ ಕ್ರಮಗಳನ್ನು ಅನುಸರಿಸಬೇಕು. ತಲೆಮಾರುಗಳು ಬಡತನ- ಸಮಸ್ಯೆ ಇರುವುದು ಒಂದು ಸಮುದಾಯಕ್ಕೆ ಶೊಭೆಯಲ್ಲ. ಹಿಂದಿನಕ್ಕಿಂತ ಈಗ ನಾವು ಆರ್ಥಿಕ ಸಬಲೀಕರಣವಾಗಿದ್ದೇವೆ ಎನ್ನುವ ನಂಭಿಕೆಯೂ ನಿಜವಲ್ಲ. ನಾವು ಮೊದಲಿಗಿಂತಲೂ ಆರ್ಥಿಕವಾಗಿ ಬಹಳಷ್ಟು ಹಿನ್ನಡೆಗೆ ಚಲಿಸುತ್ತಿದ್ದೇವೆ. ಶೈಕ್ಷಣಿಕವಾಗಿ ಮುಂದುವರಿದಿದ್ದರೂ ಮೌಲ್ಯ ಮತ್ತು ದೇವ ಭಯವೂ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ. ನಾವು ಭವಿಷ್ಯದ ತಲೆಮಾರನ್ನು ತರಭೇತುಗೊಳಿಸುವ, ಕೊಡುಗೆ ಕೊಡುವ ಜ್ಞಾನ -ವಿಜ್ಞಾನದಲ್ಲಿ ಬೆಳೆಸುವ, ಮೌಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯಲ್ಲಿ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಈಗಾಗಲೇ ಕಮ್ಯೂನಿಟಿ ಸೆಂಟರ್ ಮೂಲಕ ನಿಮ್ಮೆಲ್ಲರ ಸಹಕಾರದಿಂದ ನಾವು ಬಹಳಷ್ಟು ಪ್ರಾಯೋಗಿಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದರಲ್ಲಿ ನಿಮ್ಮ ಮಕ್ಕಳನ್ನು ಭಾಗವಹಿಸುವಂತೆ ಉತ್ತೇಜಿಸಿ ಉತ್ತಮ ಸಮಾಜ ನಿರ್ಮಿಸುವ ನಮ್ಮ ಅಭಿಯಾನಕ್ಕೆ ಭಲ ತುಂಬಲು ನಾನು ವಿನಂತಿಸುತ್ತಾ, ನಾಡಿನ ಸಮಸ್ತ ಜನರಿಗೂ ಈದುಲ್ ಪಿತ್ರ್ ನ ಹಬ್ಬದ ಶುಭಾಶಯ ತಿಳಿಸುತ್ತಿದ್ದೇನೆ ಎಂದು ಅಮ್ಜದ್ ಖಾನ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!