ಶಾಂತಿ, ಸಹಬಾಳ್ವೆಯ ಸಂದೇಶ ಸಾರುವ ಈದ್-ಉಲ್ ಫಿತರ್
ಇಂದು ನಾಡಿನೆಲ್ಲೆಡೆ ಈದ್ ಉಲ್-ಫಿತರ್ ಸಂಭ್ರಮ. ಭ್ರಾತೃತ್ವದ, ಸಹೋದರತೆಯ, ಶಾಂತಿಯ, ಸಹಬಾಳ್ವೆಯ ಸಂದೇಶ ಸಾರುವ ಹಬ್ಬವೇ ಈದುಲ್ ಫಿತರ್. ಜನರನ್ನು ಬೆಸೆಯುವ ಬಂಧವಾಗಿ, ಪ್ರೀತಿಯ ಪ್ರತೀಕವಾಗಿ ಸೌಹಾರ್ದ, ಸೋದರತೆಯ ದ್ಯೋತಕವಾಗಿ ಈ ಹಬ್ಬ ಆಚರಿಸಲಾಗುತ್ತಿದೆ.

ವಿಶ್ವ ಮುಸ್ಲಿಮರು ಒಂದು ತಿಂಗಳು ಉಪವಾಸ ವ್ರತ ಆಚರಿಸಿ ಅದರ ಸಮಾರೋಪ ಎಂಬಂತೆ ಶವ್ವಾಲ್ ತಿಂಗಳ ಮೊದಲ ದಿನ ಈದ್-ಉಲ್-ಫಿತರ್ ಆಚರಿಸುತ್ತಾರೆ. ಹಬ್ಬ ಆಚರಿಸುವ ಸಡಗರದಲ್ಲಿರುವ ನಾವು ಬಡವರ, ಅನಾಥರ, ನೊಂದವರ ಬಗ್ಗೆಯೂ ಕಣ್ಣು ಹಾಯಿಸಬೇಕಾದ ದಿನವಿದು. ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಹಬ್ಬಗಳಿಗೆ ಇದೆ. ಜಗತ್ತಿನ ಮುಸ್ಲಿಮರು ಇಂದು ಈದ್-ಉಲ್-ಫಿತರ್ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ ಎಲ್ಲರ ಮನೆ, ಮನದಲ್ಲೂ ಶಾಶ್ವತವಾಗಿ ಇರಲಿ, ವಿಶ್ವ ಶಾಂತಿಗೆ ಈ ಹಬ್ಬ ಪ್ರೇರಣೆಯಾಗಲಿ ಎನ್ನುವ ಆಶಯದೊಂದಿಗೆ ಸರ್ವರಿಗೂ ಈದ್ ಉಲ್ ಫಿತರ್ ಶುಭಾಶಯಗಳು. -ಅಮ್ಜದ್ ಖಾನ್ ಪೋಳ್ಯ