ಅಪರಿಚಿತ ವಾಟ್ಸಪ್ ಸಂದೇಶ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಆಟೋ ಚಾಲಕ
ಬಂಟ್ವಾಳ: ಅಪರಿಚಿತ ವಾಟ್ಸಪ್ ಸಂದೇಶ ನಂಬಿ App ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ ಆಟೋ ರಿಕ್ಷಾ ಚಾಲಕರೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ಎಂಬವರು ಅಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲಿಗೆ 2023ರ ಡಿಸೆಂಬರ್ 20 ರಂದು ಅಪರಿಚಿತ ವಾಟ್ಸಪ್ ನಿಂದ ಬಂದ ಸೂಚನೆಯಂತೆ, NumGenius A1 App ನ್ನು ಡೌನ್‍ಲೋಡು ಮಾಡಿಕೊಂಡಿರುತ್ತಾರೆ. ಆ APP ಮೂಲಕ ಹಣವನ್ನು ಹೂಡಿಕೆ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪರಿಚಿತ ವಾಟ್ಸಪಿನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200/- ರೂಪಾಯಿ ಹಣವನ್ನು ವರ್ಗಾಯಿಸಿದ್ದು ಆ ಪೈಕಿ 1,20,175/- ಹಣವನ್ನು ಹಿಂತಿರುಗಿಸಿದ್ದು, ಬಾಕಿ 4,65,025/- ರೂಪಾಯಿ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.