ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ. ಎಂ ಮುಸ್ತಫ ನೇಮಕ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮೈನಾರಿಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮೀಫ್ ಉಪಾಧ್ಯಕ್ಷ, ನಗರ ಪಂಚಾಯತ್ ಮಾಜಿ ಸದಸ್ಯ ಕೆ. ಎಂ. ಮುಸ್ತಫ ಅವರನ್ನು ನೇಮಿಸಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರು, ರಾಜ್ಯಸಭಾ ಎಂ. ಪಿ ಇಮ್ರಾನ್ ಪ್ರತಾಪ್ ಘರಿ ಯವರ ಅನುಮೋದನೆ ಯೊಂದಿಗೆ ಎಐಸಿಸಿ ಮೈನಾರಿಟಿ ವಿಭಾಗ ಸಂಯೋಜಕರು, ಕರ್ನಾಟಕ ಉಸ್ತುವಾರಿ ಪದಾಧಿಕಾರಿ ಶ್ರೀಮತಿ ಜೀನಾ. ಎಸ್. ಗಾಲರವರು ನೇಮಕ ಮಾಡಿದ್ದಾರೆ.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ವಿಧಾನಪರಿಷತ್ ಶಾಸಕರಾದ ಅಬ್ದುಲ್ ಜಬ್ಬಾರ್ ರವರ ಶಿಫಾರಸ್ಸಿ ನಂತೆ ಈ ನೇಮಕಾತಿ ಆಗಿದೆ.
ಈ ನೇಮಕಾತಿಗೆ ಸಹಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಪರಿಷತ್ ಶಾಸಕರು ಆದ ಹರೀಶ್ ಕುಮಾರ್, ಸುಳ್ಯ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪಿ. ಸಿ. ಜಯರಾo ರವರಿಗೆ ಕೆ. ಎಂ. ಮುಸ್ತಫ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮುಸ್ತಫ ಸುಳ್ಯ ನಗರ ಪಂಚಾಯತ್ ಸದಸ್ಯರಾಗಿ ಸುಧೀರ್ಘ 25 ವರ್ಷ ಸೇವೆ ಸಲ್ಲಿಸಿ, ಜಿಲ್ಲಾ ಯೋಜನಾ ಸಮಿತಿ, ವಕ್ಫ್ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ವರ್ಷಗಳ ಹಿಂದೆ ಇದೇ ಹುದ್ದೆಗೆ ನೇಮಕಾತಿ ಹೊಂದಿದ್ದರು, ವಿಧಾನಸಭೆ ಚುನಾವಣೆ ನಂತರ ಎಲ್ಲಾ ಸಮಿತಿಗಳನ್ನು ಬರ್ಖಾಸ್ತು ಗೊಳಿಸಲಾಗಿತ್ತು, ಈಗ ಪುನಃ ನೂತನ ರಾಜ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ.